ರಾಜಕೀಯ ಎಂಟ್ರಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ಯದುವೀರ್ ಒಡೆಯರ್

ಮಡಿಕೇರಿ: ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಯಾವುದೇ ಪಕ್ಷದ ಪ್ರಚಾರ ಕಾರ್ಯದಲ್ಲೂ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಸೇರ್ಪಡೆ ಸಂಬಂಧಿಸಿದಂತೆ ಬರುತ್ತಿದ್ದ ವದಂತಿ ಸುದ್ದಿಗಳಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೆರೆ ಎಳೆದಿದ್ದಾರೆ.

ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿರುವ ಕಾವೇರಿ ಕಾಲೇಜು ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸಮಾಜ ಸೇವೆಗಳಲ್ಲೇ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ ವಿನಃ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದರು.  ಇದನ್ನೂ ಓದಿ: ತವರಿನಲ್ಲಿಯೇ ಸಿಎಂ ಸಿದ್ದರಾಮಯ್ಯರನ್ನ ಸೋಲಿಸಲು ಬಿಜೆಪಿ ಹೈಕಮಾಂಡ್ ನಿಂದ ಮಹತ್ವದ ಸೂಚನೆ ರವಾನೆ

ಇದೇ ವೇಳೆ ಅಮಿತ್ ಶಾ ಭೇಟಿ ಕುರಿತು ಮಾತನಾಡಿದ ಅವರು, ಮಾರ್ಚ್ 30 ರಂದು ಅಮಿತ್ ಷಾ ಮೈಸೂರು ಅರಮನೆಗೆ ಭೇಟಿ ನೀಡುವ ಬಗ್ಗೆ ನನಗೆ ತಿಳಿದಿಲ್ಲ. ನನ್ನ ಗಮನಕ್ಕೂ ಇಲ್ಲಿವರೆಗೂ ಬಂದಿರಲಿಲ್ಲ, ನಿಮ್ಮಿಂದಲೇ ಗೊತ್ತಾಗ್ತಿದೆ ಅಂತ ಹೇಳಿದ್ರು.

ಒಂದು ವೇಳೆ ಅಮಿತ್ ಶಾ ಅರಮನೆಗೆ ಬಂದ್ರೆ ಭೇಟಿ ಮಾಡುತ್ತೇನೆ. ಆದರೆ ನಾನು ರಾಜಕೀಯಕ್ಕೆ ಯಾವುದೇ ಕಾರಣಕ್ಕೂ ಬರಲ್ಲ. ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ. ರಾಜಕಾರಣದಲ್ಲಿ ಆಸಕ್ತಿಯೂ ಇಲ್ಲ. ನನ್ನ ಆಸಕ್ತಿ ಏನಿದ್ರೂ ಜನರ ಜೊತೆ ಬೆರೆಯುವುದು ಅಷ್ಟೇ ಅಂದ್ರು.

Comments

Leave a Reply

Your email address will not be published. Required fields are marked *