ಅಧಿಕಾರಿ ವರ್ಗದ ಶ್ರಮಕ್ಕೆ ಯಾದಗಿರಿ ಜನತೆಯ ಮೆಚ್ಚುಗೆ

ಯಾದಗಿರಿ: ಇಡೀ ದೇಶದಲ್ಲಿಯೆ ಪಾಪಿ ಕೊರೊನಾ ತನ್ನ ರೌದ್ರ ನರ್ತನ ಮಾಡುತ್ತಿದ್ದೆ. ಆದರೆ ಯಾದಗಿರಿಯಲ್ಲಿ ಮಾತ್ರ ಕೊರೊನಾ ಇನ್ನೂ ಎಂಟ್ರಿಯಾಗಿಲ್ಲ. ಇದಕ್ಕೆ ಕಾರಣ ಅಧಿಕಾರಿಗಳ ಪರಿಶ್ರಮ, ಹೌದು ಕೊರೊನಾ ವೈರಸ್ ಹರಡದಂತೆ ಅಧಿಕಾರಿಗಳ ವರ್ಗ ಜಿಲ್ಲೆಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದೆ.

ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪುತ್ ಅವರು ಹೆಂಡತಿ ಕಳೆದ 6 ತಿಂಗಳ ಹಿಂದೆ ಹೆರಿಗೆ ಸಮಯದಲ್ಲಿ ಮಗುವಿಗೆ ಜನ್ಮ ನೀಡಿ ಪ್ರಾಣ ಬಿಟ್ಟಿದ್ದರು. ಪ್ರಕಾಶ್ ಗೆ ತಮ್ಮ ಹೆಂಡತಿ ಕಳೆದುಕೊಂಡ ದುಃಖ ಒಂದು ಕಡೆಯಾದರೆ, ಹಸುಗೂಸನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಗಲಿಗಿಲಿದೆ. ಹೀಗಿದ್ದರೂ ಪ್ರಕಾಶ್ ಜಿಲ್ಲೆಯ ಜನರ ಹಿತಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

ಸದ್ಯ ಪ್ರಕಾಶ್ ಅವರಿಗೆ ಮೂವರು ಮಕ್ಕಳಿದ್ದಾರೆ. ಕೊರೊನಾ ಮುಂಜಾಗ್ರತೆಯ ಕ್ರಮವಾಗಿ ಮಕ್ಕಳಿಂದ ದೂರ ಇರುವ ಅವರು ಮನೆಯಲ್ಲಿ ಪ್ರತ್ಯೇಕವಾದ ಕೊಣೆಯಲ್ಲಿ ವಾಸವಾಗಿದ್ದಾರೆ. ಮನೆಯಲ್ಲಿ ಮಕ್ಕಳಿದ್ದರು ಮಕ್ಕಳೊಂದಿಗೆ ಖುಷಿಪಡಲು ಆಗುತ್ತಿಲ್ಲ. ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ಜನರ ಒಳಿತಿಗಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಅವರು ಕೂಡ ಕೊರೊನಾ ವಿರುದ್ಧ ಹಗಲಿರುಳು ಹೋರಾಟ ಮಾಡುತ್ತಿದ್ದಾರೆ. ಶಂಕರಗೌಡ ಅವರ ಪ್ರೀತಿಯ ಅಜ್ಜ ಮೃತಪಟ್ಟಿದ್ದರು ಅಜ್ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೆ ಯಾದಗಿರಿಯಲ್ಲಿದ್ದುಕೊಂಡು ಕೊರೊನಾ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅಜ್ಜನ ಸಾವಿನ ನೋವಿಗಿಂತ ಜನರ ನೋವು ನನಗೆ ಮುಖ್ಯ ಎನ್ನುವ ಶಂಕರಗೌಡ ಅವರು, ತಮಗೆ ವೈಯಕ್ತಿಕವಾಗಿ ಆರೋಗ್ಯ ಸಮಸ್ಯೆಯಿದ್ದರೂ ಅದನ್ನು ಲೆಕ್ಕಿಸದೇ ಕೂಲಿ ಕಾರ್ಮಿಕರು, ರೈತರು, ಜನಸಾಮಾನ್ಯರ ಬಳಿಗೆ ತೆರಳಿ ಅವರ ಸಮಸ್ಯೆ ಆಲಿಸುತ್ತಿದ್ದಾರೆ. ಈ ಇಬ್ಬರ ಕರ್ತವ್ಯ ನಿಷ್ಠೆಗೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *