ಯಾದಗಿರಿಯಲ್ಲಿ ಕಲಬುರಗಿ ಸೋಂಕಿತ ತಂದ ಫಜೀತಿ

ಯಾದಗಿರಿ: ಗ್ರೀನ್‍ಜೋನ್‍ನಲ್ಲಿರುವ ಯಾದಗಿರಿಗೆ ಕೊರೊನಾ ಆತಂಕ ಎದುರಾಗಿದೆ. ಲಾಕ್‍ಡೌನ್ ಸಡಲಿಕೆ ಎಫೆಕ್ಟ್ ನಿಂದಾಗಿ ಯಾದಿಗಿರಿಗೆ ಬಂದು ಹೋಗಿದ್ದ ಕಲಬುರಗಿ ಸೋಂಕಿತನಿಂದ ಇದೀಗ ಜಿಲ್ಲಾಡಳಿತ ಫಜೀತಿಗೆ ಸಿಲುಕಿದೆ.

ಏಪ್ರಿಲ್ 21 ರಂದು ರೋಗಿ 413 ಕಲಬುರಗಿ ವ್ಯಕ್ತಿಗೆ ಕೊರಾನಾ ದೃಢಪಟ್ಟಿದೆ. ಇತನ ಟ್ರಾವೆಲ್ ಹಿಸ್ಟರಿಯಲ್ಲಿ ಹೊರ ಬಿದ್ದರುವ ಸತ್ಯ ಯಾದಗಿರಿ ಜನರ ನಿದ್ದೆಗೆಡಿಸಿದೆ. ಪಾಸಿಟಿವ್ ಬಂದ ವ್ಯಕ್ತಿಗೆ ಯಾದಗಿರಿ ನಗರದಲ್ಲಿ ಕನ್ನಡಕದ ಅಂಗಡಿಯಿದ್ದು, ಈ ಅಂಗಡಿ ಏಪ್ರಿಲ್ 15 ರಿಂದ 22ವರೆಗೆ ತೆರೆದಿತ್ತು. ಈತನಿಗೆ ಕೊರೊನಾಯಿದೆ ಎಂದು ಗೊತ್ತಾಗಿದ್ದರೂ ಯಾದಗಿರಿ ಜೊತೆ ನಿಕಟ ಸಂಪರ್ಕ ಹೊಂದಿದ್ದ. ಅಲ್ಲದೆ ಕಲಬುರಗಿಯಿಂದ ಯಾದಗಿರಿಗೆ ದಿನಾಲೂ ಸಂಚಾರ ಮಾಡಿದ್ದ.

ಇತನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರನ್ನು ಜಿಲ್ಲಾಡಳಿತ ಈಗಾಗಲೇ ಪತ್ತೆ ಹಚ್ಚಿ, ಪರೀಕ್ಷೆ ನಡೆಸಿದೆ. ಆದರೆ ಅವರಿಗೆ ಸದ್ಯ ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಅವರನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದೆ. ಇನ್ನೂ ದ್ವಿತೀಯ ಸಂಪರ್ಕದಲ್ಲಿರುವವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಯಾದಗಿರಿ ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.

Comments

Leave a Reply

Your email address will not be published. Required fields are marked *