ಯಾದಗಿರಿಯಲ್ಲಿ ಗ್ಯಾಂಗ್‍ರೇಪ್ – ಆರೋಪಿಗಳು ಅರೆಸ್ಟ್, ಕಾರು ವಶ

ಯಾದಗಿರಿ: ಮೈಸೂರು ಬಳಿಕ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಹೀನಾಯ ಕೃತ್ಯ ಯಾದಗಿರಿ ಜಿಲ್ಲೆಯ ಶಹಾಪೂರದಲ್ಲಿ ನಡೆದ ಕಿರಾತಕರನ್ನು ಕೊನೆಗೂ ಬಂಧಿಸಲಾಗಿದೆ. ಆರೋಪಿಗಳು ಮಹಿಳೆಯನ್ನು ಕೇವಲ ಹಿಂಸೆ ಮಾಡಿರುವುದಲ್ಲದೆ ಗ್ಯಾಂಗ್ ರೇಪ್ ಮಾಡಿರುವುದು ತನಿಖೆಯಲ್ಲಿ ಹೊರಬಿದ್ದಿದೆ.

ಆರೋಪಿಗಳೆಲ್ಲರೂ ಯುವಕರಾಗಿದ್ದು, ಆಟೋ ಚಾಲಕ ನಿಂಗರಾಜ ಹಳೆಪೇಟ್(24), ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುವ ಅಯ್ಯಪ್ಪ ಮಮದಾಪುರ್ (23), ಪಾನ್ ಶಾಪ್ ನಡೆಸುತ್ತಿರುವ ಭಿಮಾಶಂಕರ್ ಮಮದಾಪುರ್ (28), ಎಗ್ ರೈಸ್ ಬಂಡಿ ಇಟ್ಟುಕೊಂಡಿರುವ ಶರಣು ಗಂಗಾನಗರ (22) ಎಂದು ಗುರುತಿಸಲಾಗಿದೆ. ಅಲ್ಲದೆ ಆರೋಪಿಗಳ ವಿರುದ್ಧ ಸೆಕ್ಷನ್ 354/ಬಿ, 366,394,376/ಡಿ ಮೊದಲಾದ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಶಹಾಪೂರದ ಹೊಸ ಬಸ್ ನಿಲ್ದಾಣದಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಕಂಡ ಪಾನಮಕ್ತ ನಾಲ್ವರು ಯುವಕರು, ಬಲವಂತವಾಗಿ ಮಹಿಳೆಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆ ದೇಹದ ಅಂಗಾಂಗಗಳಿಹೆ ಸಿಗರೇಟ್ ನಿಂದ ಸುಟ್ಟಿದ್ದಾರೆ.

ಆರೋಪಿಗಳಿಂದ ಸ್ಥಳ ಮಹಜರು, ಕಾರ್ ವಶ:
ಒಂದು ವರ್ಷದ ಹಿಂದೆ ನಡೆದ ಶಹಾಪೂರದ ಹೊರ ವಲಯದಲ್ಲಿ ನಡೆದ ಗ್ಯಾಂಗ್ ರೇಪ್ ಸಂಬಂಧಿಸಿದಂತೆ ಯಾದಗಿರಿ ಪೊಲೀಸರಹ ಆರೋಪಿಗಳಿಂದ ಸ್ಥಳದ ಮಹಜರು ಮಾಡಿದರು. ಶಹಾಪೂರ ತಾಲೂಕಿನ ರಸ್ತಾಪುರ ಕ್ರಾಸ್ ನಲ್ಲಿ ಮುಂದಿನ ಕನ್ಯಾಕೊಳ್ಳೂರು ರಸ್ತೆಯಲ್ಲಿ ಈ ಕೃತ್ಯ ನಡೆದಿದೆ. ಕೃತ್ಯದ ನಡೆಸಿರುವ ಬಗ್ಗೆ ಪೊಲೀಸರಿಗೆ ಆರೋಪಿಗಳು ಮಾಹಿತಿ ನೀಡಿದರು. ಎಸ್ಪಿ ವೇದಮೂರ್ತಿ ನೇತೃತ್ವದಲ್ಲಿ ಈ ಸ್ಥಳ ಮಹಜರು ನಡೆಯಿತು.

ಇದನ್ನೂ ಓದಿ: ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು

ಮತ್ತೊಂದು ಕಡೆ ಆರೋಪಿಗಳು ಮಹಿಳೆಯ ಅಪಹರಣಕ್ಕೆ ಬಳಸಿದ ಸ್ವಿಫ್ಟ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಎ 36 ಎನ್ 3224 ನೊಂದಣಿ ಸಂಖ್ಯೆ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *