ನವದೆಹಲಿ: ಚೀನಾದ ಕ್ಸಿಯೋಮಿ ಕಂಪೆನಿ ರೆಡ್‍ಮೀ 4ಎ 3ಜಿಬಿ ರಾಮ್, 32 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿರುವ ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಫೋನಿಗೆ 6,999 ರೂ. ದರವನ್ನು ನಿಗದಿ ಪಡಿಸಿದ್ದು, Mi.com, ಅಮೆಜಾನ್ ಇಂಡಿಯಾ, ಪೇಟಿಎಂ, ಟಾಟಾ ಕ್ಲಿಕ್ ಮೂಲಕ ಗುರುವಾರದಿಂದ ಖರೀದಿಸಬಹುದು ಎಂದು ಕ್ಸಿಯೋಮಿ ತಿಳಿಸಿದೆ.
ರೆಡ್‍ಮೀ 4ಎ 2ಜಿಬಿ ರಾಮ್ , 16 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಫೋನ್ ಭಾರತದ ಮಾರುಕಟ್ಟೆಗೆ ಮಾರ್ಚ್ ತಿಂಗಳಿನಲ್ಲಿ 5,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಈ ಫೋನ್ ಫ್ಲಾಶ್ ಸೇಲ್ ನಲ್ಲಿ ಕೇವಲ ನಾಲ್ಕು ನಿಮಿಷದಲ್ಲಿ 2.50 ಲಕ್ಷ ಫೋನ್‍ಗಳನ್ನು ಮಾರಾಟ ಆಗುವ ಮೂಲಕ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು.
ಅಮೆಜಾನ್ ಇಂಡಿಯಾದ ಪೋರ್ಟಲ್‍ನಲ್ಲಿ ಪ್ರತಿ ಸೆಕೆಂಡ್‍ಗೆ 1500 ಫೋನ್‍ಗಳು ಬುಕ್ ಆಗಿದ್ದರೆ, ಒಂದು ನಿಮಿಷಕ್ಕೆ 50 ಲಕ್ಷ ಹಿಟ್ಸ್ ಸಂಪಾದಿಸಿತ್ತು. ಬಿಡುಗಡೆಯಾದ ದಿನವೇ ದಾಖಲೆ ಪ್ರಮಾಣದಲ್ಲಿ ಇಷ್ಟೊಂದು ಫೋನ್ ಭಾರತದಲ್ಲಿ ಮಾರಾಟವಾಗಿರುವುದು ಇದೆ ಮೊದಲು ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿತ್ತು.
ಈ ಸೆಗ್ಮೆಂಟ್‍ನಲ್ಲಿ ಉತ್ತಮ ಗುಣ ವೈಶಿಷ್ಟ್ಯಗಳು ಇರುವ ಕಾರಣ ರೆಡ್‍ಮೀ 4ಎ ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಕ್ಸಿಯೋಮಿ ಇಂಡಿಯಾದ ಆನ್‍ಲೈನ್ ಸೇಲ್ಸ್ ಮುಖ್ಯಸ್ಥ ರಘು ರೆಡ್ಡಿ ಹೇಳಿದ್ದಾರೆ.
2016ರ ನವೆಂಬರ್ ನಲ್ಲಿ ಚೀನಾದಲ್ಲಿ ಬಿಡುಗಡೆಯಾದ ನೋಟ್ 4 ಫೋನ್ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಬರೆದಿದ್ದು, 6 ತಿಂಗಳಿನಲ್ಲಿ 50 ಲಕ್ಷ ಫೋನ್ ಗಳು ಮಾರಾಟವಾಗಿದೆ ಎಂದು ಭಾರತದ ಕ್ಸಿಯೋಮಿ ಕಂಪೆನಿಯ ಆಡಳಿತ ನಿರ್ದೇಶಕ ಮನು ಕುಮಾರ್ ಜೈನ್ ಟ್ವೀಟ್ ಮಾಡಿದ್ದಾರೆ.
ಹೈ ಬ್ರಿಡ್ ಸಿಮ್‍ಸ್ಲಾಟ್ ನೀಡಿರುವ ಕಾರಣ ಎರಡು ಸಿಮ್ ಸ್ಲಾಟ್ ಅಥವಾ ಒಂದು ನ್ಯಾನೋ ಸಿಮ್ ಕಾರ್ಡ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು.
ಎಲ್‍ಟಿಇ ತಂತ್ರಜ್ಞಾನಕ್ಕೆ ಈ ಫೋನ್ ಸಪೋರ್ಟ್ ಮಾಡುವ ಕಾರಣ ಇದರಲ್ಲಿ ಜಿಯೋ ಸಿಮ್ ಹಾಕಬಹುದು. ಬೆಲೆ ಕಡಿಮೆ ಇರುವುದರಿಂದ ಇದಕ್ಕೆ ಫಿಂಗರ್‍ಪ್ರಿಂಟ್ ಸೆನ್ಸರ್ ಅನ್ನು ಕ್ಸಿಯೋಮಿ ನೀಡಿಲ್ಲ.
ಗುಣವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ:
139.5*70.4*8.5. ಮಿ.ಮೀ ಗಾತ್ರ, 131.5 ಗ್ರಾಂ ತೂಕ, ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(720*1280 ಪಿಕ್ಸೆಲ್, 296ಪಿಪಿಐ), 131.5 ಗ್ರಾಂ ತೂಕವನ್ನು ಹೊಂದಿದೆ.
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 6.0.1 ಮಾರ್ಶ್‍ಮೆಲೋ ಓಎಸ್, 1.4 GHz ಕ್ವಾಲಕಂ ಸ್ನಾಪ್‍ಡ್ರಾಗನ್ 425 ಕ್ವಾಡ್‍ಕೋರ್ ಪ್ರೊಸೆಸರ್, 16/32 ಜಿಬಿ ಆಂತರಿಕ ಮೆಮೊರಿ, 2/3 ಜಿಬಿ ರಾಮ್, 2ನೇ ಸಿಮ್ ಸ್ಲಾಟ್‍ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೊರಿ ವಿಸ್ತರಿಸಬಹುದು.
ಇತರೇ:
ಹಿಂದುಗಡೆ 13 ಎಂಪಿ, ಮುಂದುಗಡೆ 5 ಎಂಪಿ ಕ್ಯಾಮೆರಾ, ಯುಎಸ್‍ಬಿ 2.0, ತೆಗೆಯಲು ಅಸಾಧ್ಯವಾದ ಲಿಯಾನ್ 3120 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.
Get your Redmi 4A (3GB + 32GB) on https://t.co/lzFXOcGyGQ, @Flipkart, @amazonIN, @PayTM, @TataCLiQ & #MiHome starting 31st Aug! (2/2) pic.twitter.com/PGKADqeuyv
— Manu Kumar Jain (@manukumarjain) August 29, 2017
https://twitter.com/manukumarjain/status/895893233397411840





<

Leave a Reply