ವಿಜಯಪುರ: ಕೇಂದ್ರದ ವಿರುದ್ಧ ಪೇಜಾವರ ಶ್ರೀಗಳ ಹೇಳಿಕೆ ಬಗ್ಗೆ ಮಾಜಿ ಸಚಿವ ಗೋವಿಂದ ಕಾರಜೋಳ ಸಮಜಾಯಿಸಿ ನೀಡಿದ್ದಾರೆ.
ಉಡುಪಿ ಪೇಜಾವರ ಶ್ರೀಗಳಿಗೆ ಮೋದಿಯವ ಸಾಧನೆ ಬಗ್ಗೆ ಮಾಹಿತಿ ಕೊರತೆ ಮತ್ತು ತಪ್ಪು ಮಾಹಿತಿ ಇದೆ. 4 ವರ್ಷದಲ್ಲಿ ಮೋದಿ ಸರಕಾರ ಸಾಕಷ್ಟು ಸಾಧನೆ ಮಾಡಿದೆ. ದೇಶ ಕಂಡ ಉತ್ತಮ ಪ್ರಧಾನಿಗಳೆಂದರೆ ಒಂದು ವಾಜಪೇಯಿ, ಬಿಟ್ಟರೆ ಮೋದಿ ಅಂತ ಹೇಳಿದ್ರು.
ರೈತ ಫಸಲ ವಿಮಾ ಸೇರಿದಂತೆ ಹಲವು ಯೋಜನೆಗಳನ್ನ ರೈತರಿಗೆ ಮೋದಿ ಕೊಟ್ಟಿದ್ದಾರೆ. ರಾಜ್ಯದ ಸಮ್ಮಿಶ್ರ ಸರಕಾರ ನೀರಿನ ಮೇಲಿನ ಗುಳ್ಳೆ ಇದ್ದ ಹಾಗೆ. ಈ ಸರಕಾರ ಬಹಳ ದಿನ ನಡೆಯಲ್ಲ ಎಂದು ಭವಿಷ್ಯ ನುಡಿದರು. ಇದೇ ವೇಳೆ ಬಿಜೆಪಿ ಬಾಗಿಲು ಸದಾ ತೆರದಿದೆ. ಬರುವವರಿಗೆ ಸ್ವಾಗತ ಇದೆ ಎಂದರು. ಇದನ್ನೂ ಓದಿ: ಮೋದಿಯವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿ ಆಗಬೇಕಿದೆ: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ಇತ್ತೀಚೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು, ನರೇಂದ್ರ ಮೋದಿಯವರ ಸರ್ಕಾರ ಬಂದು ನಾಲ್ಕು ವರ್ಷವಾದರು, ಚುನಾವಣೆ ಪೂರ್ವದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತರುವುದಾಗಿ ಭರವಸೆ ನೀಡಿ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:ಪೇಜಾವರ ಶ್ರೀಗಳು ಮೋದಿ ಸರ್ಕಾರವನ್ನ ಟೀಕಿಸಿಲ್ಲ: ಸೊಗಡು ಶಿವಣ್ಣ
ಮೋದಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಆರ್ಥಿಕತೆ ಸುಧಾರಣೆಯನ್ನು ಹೆಚ್ಚು ಮಾಡುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಮಾಡಿದ್ದಾರೆ. ಅಲ್ಲದೇ ಶ್ರೀಮಂತರಿಗೂ ಭ್ರಷ್ಟಾಚಾರ ಮಾಡಲಾಗದಂತಹ ಸನ್ನಿವೇಶವನ್ನು ನಿರ್ಮಿಸಿದ್ದಾರೆ. ಆದರೆ ಅಚ್ಚೆದಿನ್ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಈ ಕಾರ್ಯವನ್ನು ಬೇಗ ಮಾಡಲಿ ಎಂಬ ಉದ್ದೇಶದಿಂದ ಹೇಳಿದ್ದಾಗಿ ತಿಳಿಸಿದ್ದರು. ಶ್ರೀ ಅವರ ಈ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಪೇಜಾವರ ಶ್ರೀ ತನ್ನ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ಕುರಿತ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ – ಪೇಜಾವರ ಶ್ರೀ

Leave a Reply