ವಿಶ್ವದ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ್ಯೂಸ್ ಆಂಕರ್ ಅನಾವರಣ- ವಿಡಿಯೋ ನೋಡಿ

ಬೀಜಿಂಗ್: ಜಗತ್ತಿನ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ ಅಥವಾ ಕೃತಕ ಬುದ್ಧಿಮತ್ತೆ) ನ್ಯೂಸ್ ಆಂಕರ್ ಚೀನಾದಲ್ಲಿ ಅನಾವರಣಗೊಂಡಿದೆ.

ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾ ಝಿನುವಾ ಸುದ್ದಿ ಸಂಸ್ಥೆ ಮೊದಲ ಬಾರಿಗೆ ಎಐ ನ್ಯೂಸ್ ಅಂಕರ್ ಪರಿಚಯಿಸಿದೆ.

ಇಂಗ್ಲಿಷ್ ಭಾಷೆಯನ್ನು ಮಾತನಾಡುವ ಈ ಕೃತಕ ಆಂಕರ್, ತಾನು ಬರವಣಿಗೆಯಲ್ಲಿ ಕೊಟ್ಟಿರುವುದನ್ನ ಕ್ಯಾಮೆರಾ ಮುಂದೆ ಓದಲಿದ್ದೇನೆ ಎಂದು ಹೇಳಿದೆ. ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ರೂಪವನ್ನ ಝಿನುವಾದ ಜಾಂಗ್ ಜಾಹೋ ಎಂಬ ಆಂಕರ್ ನ ಪ್ರತಿರೂಪವಾಗಿದೆ.

ನ್ಯೂಸ್ ಚಾನೆಲ್‍ನಲ್ಲಿ ತನ್ನನ್ನ ಪರಿಚಯಿಸಿಕೊಂಡ ರೊಬೋಟ್ “ಎಲ್ಲರಿಗೂ ನಮಸ್ಕಾರ, ನಾನು ಕೃತಕ ಬುದ್ಧಿಮತ್ತೆಯ ಆಂಕರ್. ಈ ಚಾನೆಲ್‍ನಲ್ಲಿ ಇದು ನನ್ನ ಮೊದಲ ದಿನ. ನನ್ನ ಧ್ವನಿಯು ಜಾಂಗ್ ಜಾಹೋ ಅವರ ಪ್ರತಿರೂಪವಾಗಿದೆ. ಇವರು ಝಿನುವಾದಲ್ಲಿ ನಿಜವಾದ ನ್ಯೂಸ್ ಆಂಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದೆ.

“ಮಾಧ್ಯಮ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ನವೀನ ಆವಿಷ್ಕಾರ ಮತ್ತು ಆಳವಾದ ಏಕೀಕರಣ ನಡೆಯುತ್ತಿದೆ. ನನ್ನ ಸಿಸ್ಟಂನಲ್ಲಿ ಟೈಪ್ ಮಾಡಿದ ಎಲ್ಲಾ ಮಹಿತಿಗಳನ್ನ ದಣಿವಿಲ್ಲದೆ ನಿಮಗೆ ಸದಾ ತಿಳಿಸುತ್ತೇನೆ. ನಾನು ಹೊಸ-ಹೊಸ ಅನುಭವಗಳನ್ನ ನಿಮ್ಮ ಮುಂದೆ ತರಲು ಬಯಸುತ್ತೇನೆ” ಎಂದು ಆಂಕರ್ ಸುದ್ದಿ ವಾಹಿನಿಯಲ್ಲಿ ಮಾತನಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *