ಪ್ರಧಾನಿ ಮಾತೇ ಕೇಳಲ್ವಾ ನೀನು? – ಪಾಕ್ ಕ್ಯಾಪ್ಟನ್ ಟ್ರೋಲ್

ನವದೆಹಲಿ: ಮ್ಯಾಂಚೆಸ್ಟರ್ ವಿಶ್ವಕಪ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಿ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರ ಸಲಹೆಯನ್ನು ನಿರ್ಲಕ್ಷ್ಯ ಮಾಡಿದಕ್ಕೆ ಪಾಕ್ ತಂಡದ ನಾಯಕ ಸರ್ಫರಾಜ್ ಅಹಮದ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

‘ಸರ್ಫರಾಜ್.. ನಮ್ಮ ಪ್ರಧಾನಿಗಳ ಮಾತನ್ನೇ ನೀವು ಕೇಳುವುದಿಲ್ಲವಾ? ಎಷ್ಟು ಪೊಗರು? ಎಂದು ಪಾಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸರ್ಫರಾಜ್ ಅಹಮದ್ ರನ್ನ ತರಾಟೆ ತೆಗೆದುಕೊಂಡಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನವೇ ಟ್ವೀಟ್ ಮಾಡಿದ್ದ ಪಾಕಿಸ್ತಾನ ಪ್ರಧಾನಿ, ಮಾಜಿ ಪಾಕ್ ಕ್ರಿಕೆಟ್ ತಂಡದ ನಾಯಕ, ವಿಶ್ವಕಪ್ ವಿಜೇತ ತಂಡದ ನಾಯಕರೂ ಆಗಿದ್ದ ಇಮ್ರಾನ್ ಖಾನ್, ಪಂದ್ಯದಲ್ಲಿ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಿ. ಸೋಲಿನ ಭಯ ಬಿಟ್ಟು ಧೈರ್ಯದಿಂದ ಆಡಿ ಎಂದು ಸಲಹೆ ನೀಡಿದ್ದರು. ಆದರೆ ಇತ್ತ ಪಂದ್ಯದಲ್ಲಿ ಟಾಸ್ ಗೆಲುವು ಪಡೆಯುತ್ತಿದಂತೆ ಅಚ್ಚರಿ ಎಂಬಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಸರ್ಫರಾಜ್ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆ ವೇಳೆಗಾಗಲೇ ಪಂದ್ಯದಲ್ಲಿ ಪಾಕ್ ಸೋಲುವುದು ಖಚಿತ ಎಂದು ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇತ್ತ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಮೈದಾನದಲ್ಲೇ ಆಕಳಿಸಿದ್ದ ಸರ್ಫರಾಜ್ ಅಹಮದ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗಿತ್ತು.

ಸದ್ಯ ಇಮ್ರಾನ್ ಹೇಳಿದಂತೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರೆ ಭಾರತ ವಿರುದ್ಧ ಗೆಲ್ಲುವ ಅವಕಾಶ ಇತ್ತು. ಪಂದ್ಯದಲ್ಲಿ ಸೋಲಲು ಸರ್ಫರಾಜ್ ಅಹಮದ್ ಕಾರಣ ಎಂದು ಪಾಕ್ ಅಭಿಮಾನಿಗಳು ಗರಂ ಆಗಿದ್ದಾರೆ. ಪಂದ್ಯ ಬಳಿಕ ಮಾತನಾಡಿದ ಕೊಹ್ಲಿ ಟಾಸ್ ಗೆಲುವು ಪಡೆದ್ದರೆ ತಾನು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದರು. ಅಲ್ಲದೇ ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆಯೂ ಕೊಹ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿತ್ತು.

https://twitter.com/_Madhu__/status/1140192647476236288

Comments

Leave a Reply

Your email address will not be published. Required fields are marked *