ಹಾಸನ: ಗೊರೂರಿನಲ್ಲಿರುವ ಹೇಮಾವತಿ ಡ್ಯಾಮ್‍ನ ಪಂಪ್ ಹೌಸ್‍ನಲ್ಲಿ ದುರಂತವೊಂದು ನಡೆದಿದೆ. ಸೇಫ್ಟಿ ಬೆಲ್ಟ್ ಇಲ್ಲದೆ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ಸುರೇಶ್ ಎಂದು ಗುರುತಿಸಲಾಗಿದೆ. ಇವರು ಪಂಪ್ ಹೌಸ್‍ನಲ್ಲಿ ಸೇಫ್ಟಿ ಬೆಲ್ಟ್ ಇಲ್ಲದೆ ಛಾವಣಿಯ ಶೀಟ್ ಸರಿ ಮಾಡುತ್ತಿದ್ದರು. ಪರಿಣಾಮ ಆಯತಪ್ಪಿ 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.

ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿ ಕೊರಳಪಟ್ಟಿ ಹಿಡಿದು ಎಳೆದಾಡಿದ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ FIR

Leave a Reply