ನಮ್ಮ‌ ಕ್ಷೇತ್ರದಲ್ಲಿ ನಾವು ಗಂಡಸರಲ್ವಾ…? ಹೊರಗಿನವರಿಗೆ ಟಿಕೆಟ್ ಕೊಟ್ರೆ ನಾವು ಕೆಲಸ ಮಾಡಲ್ಲ: ಮನೋಹರ್ ತಹಶೀಲ್ದಾರ್

MANOHAR TAHASHILDAR

ಬೆಂಗಳೂರು: ಉಪ ಚುನಾವಣೆಗೆ ಟಿಕೆಟ್ ಘೋಷಣೆ ಮೊದಲೇ ಕಾಂಗ್ರೆಸ್ ನಲ್ಲಿ ಬಂಡಾಯದ ಕೂಗು ಎದ್ದಿದೆ. ಹಾನಗಲ್ ಟಿಕೆಟ್ ಆಕಾಂಕ್ಷಿ ಮನೋಹರ್ ತಹಶೀಲ್ದಾರ್ ಹಿಂದಿನ ಅಭ್ಯರ್ಥಿ ಶ್ರೀನಿವಾಸ ಮಾನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಾವು ಗಂಡಸರಲ್ವಾ….? ಹೊರಗಿನವರು ಬಂದ್ರೆ ಅವರಿಗೆ ಟಿಕೆಟ್ ಕೊಟ್ಟರೆ ನಾವು ಕೆಲಸ ಮಾಡಲ್ಲ ಎಂದಿದ್ದಾರೆ.

ಸಿದ್ದು ಭೇಟಿಗೆ ಸಿಗದ ಅವಕಾಶ: ಸಿದ್ದರಾಮಯ್ಯ ಭೇಟಿಗೆ ಸಿದ್ದರಾಮಯ್ಯ ನಿವಾಸದ ಬಳಿ ಬಂದಿದ್ದ ಮನೋಹರ್ ತಹಶೀಲ್ದಾರ್‌ಗೆ ಈಗ ಸಿದ್ದರಾಮಯ್ಯ ಭೇಟಿ ಸಾಧ್ಯ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಡಿ ಗ್ಲಾಮ್ ಲುಕ್‍ನಲ್ಲಿ ಮಿಂಚು-‘ಶ್ರೀವಲ್ಲಿ’ಯಾದ ರಶ್ಮಿಕಾ

ಸಿದ್ದರಾಮಯ್ಯ ನಿವಾಸದಿಂದ ವಾಪಸ್ ತೆರಳುವ ಮುನ್ನ ಮಾತನಾಡಿದ ಮನೋಹರ್ ತಹಶೀಲ್ದಾರ್, ಹಾನಗಲ್ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಶ್ರೀನಿವಾಸ ಮಾನೆ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಾರಿ ನನಗೇ ಟಿಕೆಟ್ ಕೊಡಲೇಬೇಕು ಎಂದರು. ನಾವೇನು ಗಂಡಸರಲ್ವಾ..? ನಮಗೆ ಏಕೆ ಟಿಕೆಟ್ ನೀಡಲ್ಲ. ಶ್ರೀನಿವಾಸ್ ಮಾನೆ ಅವರಿಗೆ ಟಿಕೆಟ್ ಕೊಡಬಾರದು. ನಮ್ಮ ಕ್ಷೇತ್ರದಲ್ಲಿ ಬೇರೆಯವರಿಗೆ ಹೊರಗಿನವರಿಗೆ ಹೇಗೆ ಟಿಕೆಟ್ ಕೊಡ್ತಾರೆ.ಈ ಬಾರಿ ನಾವು ಇದನ್ನ ಸಹಿಸಲ್ಲ ಎಂದರು. ಇದನ್ನೂ ಓದಿ: ನಾಲ್ವರು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- 9 ತಿಂಗಳ ಕಂದಮ್ಮನನ್ನು ಕತ್ತು ಹಿಸುಕಿ ಕೊಂದಿದ್ದ ತಾಯಿ!

ಕಳೆದ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಹಾನಗಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಈ ಬಾರಿ ಹಾನಗಲ್ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಡಬೇಕು. ನನಗೇ ಕೊಡಬೇಕು. ಅಕಸ್ಮಾತ್ ನನಗೆ ಕೊಡದಿದ್ದರೆ ಹಾನಗಲ್ ಕ್ಷೇತ್ರದ ಸ್ಥಳೀಯರಿಗೆ ಯಾರಿಗಾದ್ರೂ ಟಿಕೆಟ್ ಕೊಡಲಿ, ನಾನು ಕೆಲಸ ಮಾಡ್ತೇನೆ. ಆದರೆ ಹೊರಗಡೆಯಿಂದ ಬಂದಿರುವ ಶ್ರೀನಿವಾಸ್ ಮಾನೆಗೆ ಟಿಕೆಟ್ ಕೊಟ್ಟರೆ ನಾವ್ಯಾರೂ ಕೆಲಸ ಮಾಡಲ್ಲ. ನಮ್ಮ ಮನೆಯನ್ನು ನಮ್ಮ ಮನೆಯ ಹಿರಿಯರು ನಡೆಸಬೇಕು. ಹೊರಗಿನವರಿಗೆ ನಮ್ಮ ಮನೆ ನಡೆಸಲು ನಾವೇಕೆ ಬಿಡಬೇಕು ಎಂದು ಹರಿಹಾಯ್ದರು.

Comments

Leave a Reply

Your email address will not be published. Required fields are marked *