ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಸನ್ಮಾನ- ತಲೆಬಾಗಿ ಕೈಮುಗಿದ ಪ್ರಧಾನಿ

ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿರುವ ಖುಷಿಯಲ್ಲಿ ಬಿಜೆಪಿ ಕಾರ್ಯಕರ್ತೆಯರು ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಸನ್ಮಾನ ಮಾಡಿದ್ದಾರೆ.

ದೆಹಲಿಯ ಬಿಜೆಪಿ (BJP) ಪ್ರಧಾನ ಕಚೇರಿಯಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ದೊಡ್ಡದಾದ ಹೂವಿನ ಮಾಲೆಯನ್ನು ಪ್ರಧಾನಿ ಕೊರಳಿಗೆ ಹಾಕುವ ಮೂಲಕ ಗೌರವ ಸಮರ್ಪಿಸಿದ್ದಾರೆ.

ಮಹಿಳೆಯರ ಗೌರವವಕ್ಕೆ ಪ್ರಧಾನಿ ಮೋದಿ ಅವರು ತಲೆಬಾಗಿ ಗೌರವಿಸಿದರು. ಎಲ್ಲ ಮಹಿಳೆಯರಿಗೂ ಇದೊಂದು ದೊಡ್ಡ ಕೊಡುಗೆ ಎಂದು ಅಲ್ಲಿ ನೆರೆದಿದ್ದ ಮಹಿಳೆಯರು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

ಕೇಂದ್ರ ಸರ್ಕಾರ ಮಂಡಿಸಿದ್ದ ನಾರಿಶಕ್ತಿ ವಂದನ್ ಅಧಿನಿಯಮಕ್ಕೆ ಲೋಕಸಭೆ ಅನುಮೋದನೆ ನೀಡಿದೆ. ದಿನವಿಡಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದ ಬಳಿಕ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಸೂದೆ ಪರ 454 ಮಂದಿ ಪರ ಮತದಾನ ಮಾಡಿದರೆ ಇಬ್ಬರು ವಿರೋಧಿಸಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]