ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ

ಧಾರವಾಡ: ಜುಂಬಾ ನೃತ್ಯದಲ್ಲಿ ಮಹಿಳೆಯರ ಮೈ ಮೇಲೆ ಸಾಂಪ್ರದಾಯಿಕ ಸೀರೆಯಿದ್ರೆ, ಕಾಲಲ್ಲಿ ಮಾತ್ರ ಕ್ರೀಡಾ ಶೂ. ಮಗದೊಂದು ಕಡೆ ಸೀರೆಯಲ್ಲೇ ಪಾಶ್ಚಿಮಾತ್ಯ ಸಂಗೀತಕ್ಕೂ ಸಖತ್ ಸ್ಟೆಪ್ ಹಾಕುತ್ತಿರುವ ಮಹಿಳಾ ಸಮೂಹ. ಇಂದು ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ಕಂಡು ಬಂದ ದೃಶ್ಯ.

ಯಾವುದೇ ಕಾರ್ಯಕ್ರಮವಿದ್ದರೂ ಮಹಿಳೆಯರು ಅಂದ-ಚೆಂದವಾಗಿ ಉಡುಗೆ-ತೊಡುಗೆ ಜೊತೆಗೆ ಶೃಂಗಾರ ಮಾಡಿಕೊಂಡು ಬರುವುದು ಸಾಮಾನ್ಯ. ಆದರೆ ಇಲ್ಲಿ ಓಡೋದಕ್ಕಾಗಿಯೇ ಮಹಿಳೆಯರು ಹೀಗೆ ಸೀರೆಯಲ್ಲಿ ಬಂದಿದ್ದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾರಿ ಶಕ್ತಿಯ ಪ್ರದರ್ಶನದ ಪ್ರಯುಕ್ತ ರೋಟರಿ ಕ್ಲಬ್ ಆಫ್ ಸೆವೆಲ್ ಹಿಲ್ಸ್ ಧಾರವಾಡ ಘಟಕದ ವತಿಯಿಂದ ಆಯೋಜಿಸಿದ್ದ ಸೀರೆಯಲ್ಲಿ ನಾರಿಯರ ಓಟದ ದೃಶ್ಯ ಇದು. ಸೀರೆಯಲ್ಲಿ ನೂರಾರು ಮಹಿಳೆಯರು ಉತ್ಸಾಹದಿಂದಲೇ ಆಗಮಿಸಿ, ನಾವು ಎಲ್ಲದಕ್ಕೂ ಸೈ ಅನ್ನೋದನ್ನು ಇಲ್ಲಿ ತೋರಿಸಿಕೊಟ್ಟರು. ಇದನ್ನೂ ಓದಿ : ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ

ಸೀರೆಯಲ್ಲಿ ನಾರಿಯರ ಓಟದ ಬಗ್ಗೆ ಮುಂಚಿತವಾಗಿಯೇ ಎಲ್ಲರಿಗೂ ತಿಳಿಸಲಾಗಿತ್ತು. ಹೀಗಾಗಿ ಧಾರವಾಡ ಮಾತ್ರವಲ್ಲದೇ ಸುತ್ತಮುತ್ತಲಿನ ಅನೇಕ ಕಡೆಗಳಿಂದ ಮಹಿಳೆಯರು ಈ ಓಟದಲ್ಲಿ ಪಾಲ್ಗೊಂಡಿದ್ದರು. ವೈದ್ಯರು, ಉದ್ಯಮಿಗಳು, ಶಿಕ್ಷಕರು, ಸರ್ಕಾರಿ ಉದ್ಯೋಗಿಗಳು, ಸಂಘಟಕರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಂದ ಹಿಡಿದು ಕಾಲೇಜು ವಿದ್ಯಾರ್ಥಿನಿಯರು ಮಾತ್ರವಲ್ಲ ಸಾಮಾನ್ಯ ಗೃಹಸ್ಥ ಮಹಿಳೆಯರೂ ಪಾಲ್ಗೊಂಡಿದ್ದರು. ಇದನ್ನೂ ಓದಿ : ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022: ತೆಂಡೂಲ್ಕರ್, ಜಾವೇದ್ ಪಟ್ಟಿಗೆ ಸೇರಿದ ಮಿಥಾಲಿ ರಾಜ್

ಬೆಳಗ್ಗೆ 6.30ಕ್ಕೆ ಸರಿಯಾಗಿ ಧಾರವಾಡ ಕೆಸಿಡಿ ಮೈದಾನದಲ್ಲಿ ಜಮಾವಣೆಗೊಂಡ ಮಹಿಳೆಯರಿಗೆ ಮೊದಲು ಅರ್ಧ ಗಂಟೆಗಳ ಕಾಲ ವಾರ್ಮಾಪ್ ಗಾಗಿ ಜುಂಬಾ ಡ್ಯಾನ್ಸ್ ಮಾಡಿಸಲಾಯಿತು. ಈ ವೇಳೆ ಅನೇಕ ಪಾಶ್ಚಿಮಾತ್ಯ ಸಂಗೀತ, ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಹಾಡುಗಳಿಗೂ ಮಹಿಳೆಯರು ಸೀರೆಯಲ್ಲಿಯೇ ಸ್ಟೆಪ್ ಹಾಕಿದರು. ಬಳಿಕ ಕೆಸಿಡಿ ಮೈದಾನದಿಂದ ಕಲಾಭವನ ಆವರಣದವರೆಗೂ ಮ್ಯಾರಾಥಾನ್ ನಡೆಸಲಾಯಿತು.

Comments

Leave a Reply

Your email address will not be published. Required fields are marked *