ಶಬರಿಮಲೆ ಎಂಟ್ರಿಗೆ ಕೊಡಗಲ್ಲೇ ಸ್ಕೆಚ್- ಲಾಡ್ಜ್‌ನಲ್ಲಿ ಉಳಿದಿದ್ರು ಬಿಂದು, ಕನಕದುರ್ಗ

– ಮಾಂಸ ತಿಂದು ಅಯ್ಯಪ್ಪನ ದರ್ಶನ ಪಡೆದ್ರಾ..?

ಮಡಿಕೇರಿ: ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದು 8 ಶತಮಾನದ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಮಹಾನ್ ಸಾಧಕಿಯರು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ವೀರಮಣಿಕಂಠನ ಸನ್ನಿಧಿಗೆ ಪ್ರವೇಶಿಸಲು ಸಂಚು ರೂಪಿಸಿರುವ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಪ್ರವೇಶಕ್ಕೂ 4 ದಿನಗಳ ಮೊದಲೇ ಅಂದ್ರೆ ಡಿಸೆಂಬರ್ 29ರ ಮಧ್ಯಾಹ್ನ 2 ಗಂಟೆ ವೇಳೆಗೆ ಬಿಂದು ಮತ್ತು ಕನಕದುರ್ಗ ಕೊಡಗಿನ ವಿರಾಜಪೇಟೆಗೆ ಬಂದಿಳಿದಿದ್ದರು. ದೊಡ್ಡೆಟ್ಟಿ ವೃತ್ತದ ಬಳಿಯಿರೋ ಸೀತಾಲಕ್ಷ್ಮೀ ಲಾಡ್ಜ್‍ನಲ್ಲಿ ಬಿಂದು ಹೆಸರಲ್ಲಿ ರೂಂ ಬುಕ್ ಮಾಡಿದ್ರು. ಇವರೊಂದಿಗೆ ಬಂದಿದ್ದ ಪುರುಷ ಇವರನ್ನು ಬಿಟ್ಟು ವಾಪಸ್ ಹೋಗಿದ್ದನು. ಲಾಡ್ಜ್‍ನಲ್ಲಿ ಬಿರಿಯಾನಿ ಅದು ಇದು ಅಂತ ಭರ್ಜರಿ ಮಾಂಸದೂಟ ಮಾಡಿದ್ದ ಈ ಮಹಿಳೆಯರು ಯಾವುದೇ ವೃತ ಪಾಲಿಸಿರಲಿಲ್ಲ. 2 ದಿನ ಅಲ್ಲೇ ಉಳಿದುಕೊಂಡಿದ್ದ ಇವರು ಡಿಸೆಂಬರ್ 31ರಂದು ರೂಂ ಖಾಲಿ ಮಾಡಿದ್ರು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಅಂತ ಲಾಡ್ಜ್ ಮಾಲೀಕ ಹರಿಹರನ್ ತಿಳಿಸಿದ್ದಾರೆ.

ಬಿಂದು ಮತ್ತು ಕನಕದುರ್ಗ ಅಲ್ಲಿಂದ ನೇರವಾಗಿ ಅಯ್ಯಪ್ಪನ ಸನ್ನಿಧಿಗೆ ಹೊರಟಿದ್ರು. ಕುಟುಂಬದ ಜೊತೆ ಸಂಪರ್ಕದಲ್ಲಿರದೇ ಅಜ್ಞಾತವಾಗಿದ್ದ ಇವರು ಜನವರಿ 2ರಂದು ನಸುಕಿನಲ್ಲಿ ದೇವಾಲಯ ಪ್ರವೇಶಿಸಿದ್ರು. ಶತಶತಮಾನಗಳಿಂದ ವೀರಮಣಿಕಂಠನ ಸನ್ನಿಧಿಯಲ್ಲಿ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಮೀರಿ ದೇಶಾದ್ಯಂತ ಸುದ್ದಿಯಾದ್ರು. ಇದನ್ನೂ ಓದಿ:  ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!


ಈ ಮಹಿಳೆಯರಿಗೆ ನಿಜವಾಗಿಯೂ ಅಯ್ಯಪ್ಪನ ಮೇಲೆ ಭಕ್ತಿ ಇದ್ದಿದ್ದರೆ, ವ್ರತ ಪಾಲಿಸಿ ದರ್ಶನಕ್ಕೆ ತೆರಳಬಹುದಿತ್ತು. ಆದ್ರೆ ಇವರು ಮಾಂಸದೂಟ ಸೇವಿಸಿ, ಯಾವ ವ್ರತವನ್ನೂ ಪಾಲಿಸದೇ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇವರಿಗೆ ಲಾಡ್ಜ್‍ನಲ್ಲಿ ಪೊಲೀಸರೇ ರೂಂ ಬುಕ್ ಮಾಡಿದ್ದು, ಎಲ್ಲವೂ ಕೇರಳ ಸರ್ಕಾರವೇ ಮಾಡಿಸಿತಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಇದ್ರಿಂದಾಗಿ ದೇವರ ನಾಡು ಮತ್ತಷ್ಟು ಧಗಧಗಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಇಬ್ಬರು ಮಹಿಳೆಯರ ಪ್ರವೇಶ: ಶಬರಿಮಲೆ ಅಯ್ಯಪ್ಪ ದೇವಾಲಯ ಬಂದ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *