ಮಹಿಳೆಯರು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು: ಜೊಲ್ಲೆ ಕರೆ

ಚಿಕ್ಕೋಡಿ: ಹೆಣ್ಣು ಮಗುವಿನ ಭವಿಷ್ಯಕ್ಕೆ ಸುಕನ್ಯಾ ಸಮೃದ್ಧಿ ಯೋಜನೆ ಭದ್ರತೆಯಾಗಿದೆ ಎಂದು ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮದಲ್ಲಿ ಸರ್ಕಾರದ ವತಿಯಿಂದ 700 ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಪಾಸ್‍ಬುಕ್‍ಗಳನ್ನು ವಿತರಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮನೆಯ ಭಾಗ್ಯಲಕ್ಷ್ಮಿಯಾಗಿರುವ ಹೆಣ್ಣು ಸಮಾಜದ ಕಣ್ಣು. ಅವರ ಆರೋಗ್ಯ ಕಾಪಾಡುವುದು, ಶಿಕ್ಷಣ, ಪ್ರತಿಭೆಗೆ ಪೆÇ್ರೀತ್ಸಾಹ ನೀಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಮ್ಮ ಸೇವೆ ಸದಾ ಅವಿರತವಾಗಿರುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳೆಯ ಸ್ವಾವಲಂಬನೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಯೋಜನೆಗಳ ಲಾಭವನ್ನು ಮಹಿಳೆಯರು ಪಡೆಯುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು. ಇದನ್ನೂ ಓದಿ: ಯುದ್ಧ ವಿರೋಧಿ ರಷ್ಯನ್ನರ ಬಂಧನ- ಪುಟಿನ್‌ ರಷ್ಯಾದವನಲ್ಲ ಎಂದ ನಾವೆಲ್ನಿ

ಈ ಸಂದರ್ಭದಲ್ಲಿ ಸಿಡಿಪಿಓ, ಸುಮಿತ್ರಾ.ಡಿ.ಬಿ, ಸ್ಥಳೀಯ ಮುಖಂಡರು, ಗಣ್ಯರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *