ವಾರಕ್ಕೊಮ್ಮೆ ಕುಡಿತಿದ್ದೋರು ಇನ್ಮೇಲೆ ದಿನಾ ಕುಡಿಯಲು ಆರಂಭಿಸ್ತಾರೆ – ಮಹಿಳೆಯರ ಪ್ರತಿಭಟನೆ

ಚಿಕ್ಕಮಗಳೂರು: ಗಂಡಂದಿರು ವಾರಕ್ಕೆ ಒಮ್ಮೆ ಕುಡಿಯುತ್ತಿದ್ದರು, ಈಗ ದಿನ ಕುಡಿಯಲು ಆರಂಭಿಸುತ್ತಾರೆ. ಹಾಗಾಗಿ ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರು ಬಾರ್ ಮುಂದೆ ಪ್ರತಿಭಟನೆ ನಡೆಸಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

ಈ ಬಾರ್ ಶುಕ್ರವಾರ ತಾನೇ ಓಪನ್ ಆಗಿತ್ತು. ಬಾರಿನಿಂದ ಮುಂದಾಗೋ ಅನಾಹುತ, ತೊಂದರೆಯನ್ನ ಮನಗಂಡ ಹಳ್ಳಿ ಮಹಿಳೆಯರು ಒಂದೇ ದಿನಕ್ಕೆ ಬಾರ್ ಮುಂದೆ ಧರಣಿ ನಡೆಸಿ ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಆಗ್ರಹಿಸಿದ್ದಾರೆ.

ಎಮ್ಮೆದೊಡ್ಡಿಯ ಮುಸ್ಲಾಪುರ ಸುತ್ತಮುತ್ತ ಯಾವುದೇ ಬಾರ್ ಇರಲಿಲ್ಲ. ಹಾಗಾಗಿ ನಿನ್ನೆ ತಾನೇ ನೂತನ ಬಾರ್ ಓಪನ್ ಆಗಿತ್ತು. ಸಾಲದ್ದಕ್ಕೆ ಅದೇ ಮಾರ್ಗದಲ್ಲಿ ಶಾಲೆ ಬೇರೆ ಇದೆ. ಕುಡಿದು ದಾರಿಯಲ್ಲಿ ಹೋಗೋ-ಬರೋ ಹೆಣ್ಮಕ್ಕಳು, ಹೆಂಗಸರಿಗೆ ಕಿಟಲೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತೆ. ಅಷ್ಟೆ ಅಲ್ಲದೆ ಈ ಭಾಗದಲ್ಲಿ ಇರುವವರೆಲ್ಲಾ ಕೂಲಿ ಕಾರ್ಮಿಕರು. ಅವರು ಇಷ್ಟು ದಿನ ದುಡಿದು ಜೀವನ ಮಾಡುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ನೀಡಿದ ಲಸಿಕೆಗಳ ಪೈಕಿ ಶೇ.11 ರಷ್ಟು ಪಾಲು ರಾಜ್ಯದ್ದು: ಡಾ.ಕೆ.ಸುಧಾಕರ್

ಸುತ್ತಮುತ್ತ ಬಾರ್ ಇಲ್ಲದ ಕಾರಣ ವಾರಕ್ಕೊಮ್ಮೆ ಸಂತೆಗೆ ಹೋದಾಗ ಕುಡಿದು ಬರುತ್ತಿದ್ದರು. ಈಗ ಇಲ್ಲೇ ಬಾರ್ ಮಾಡಿದ್ದಾರೆ. ಇನ್ನು ಮುಂದೆ ದಿನಾ ಕುಡಿಯಲು ಆರಂಭಿಸುತ್ತಾರೆ. ದುಡಿದದ್ದನ್ನೆಲ್ಲಾ ಬಾರಿಗೆ ಹಾಕುತ್ತಾರೆ. ಆಗ ಹೆಂಡತಿ-ಮಕ್ಕಳ ಕಥೆ ಏನೆಂದು ಪ್ರಶ್ನಿಸಿರೋ ಈ ಬಾರಿನಿಂದ ಸುತ್ತಮುತ್ತಲಿನ 28 ಹಳ್ಳಿಗೆ ತೊಂದರೆಯಾಗಲಿದೆ. ಹಾಗಾಗಿ ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರು-ಪುರುಷರು ಬಾರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

Comments

Leave a Reply

Your email address will not be published. Required fields are marked *