ಅಮೆರಿಕದಲ್ಲಿ ಮಹಿಳೆಯರು ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್‌ಗಳನ್ನು ಡಿಲೀಟ್ ಮಾಡುತ್ತಿದ್ದಾರೆ – ಏಕೆ ಗೊತ್ತಾ?

ವಾಷಿಂಗ್ಟನ್: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಮಾಡಿದಾಗಿನಿಂದ ಮಹಿಳೆಯರು ತಮ್ಮ ಸ್ಮಾರ್ಟ್ ಫೋನ್‌ಗಳಿಂದ ಮುಟ್ಟಿನ ದಿನಾಂಕವನ್ನು ಪತ್ತೆ ಹಚ್ಚುವ ಆ್ಯಪ್(ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್)ಗಳನ್ನು ಸಾಮೂಹಿಕವಾಗಿ ಡಿಲೀಟ್ ಮಾಡುತ್ತಿದ್ದಾರೆ. ಮಹಿಳೆಯರು ಈ ರೀತಿ ಒಂದು ಪುಟ್ಟ ಹಾಗೂ ಅತಿ ಉಪಯುಕ್ತ ಅಪ್ಲಿಕೇಶನ್ ಅನ್ನು ಅಳಿಸಿ ಹಾಕುವುದರ ಹಿಂದಿನ ಕಾರಣ ಏನು ಎಂಬುದಕ್ಕೆ ಉತ್ತರ ಇಲ್ಲಿದೆ.

ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್‌ಗಳು ಮಹಿಳೆಯರಿಗೆ ಅತಿ ಉಪಯುಕ್ತ ಅಪ್ಲಿಕೇಶನ್‌ಗಳಾಗಿದ್ದು, ಇವು ಪ್ರತೀ ತಿಂಗಳು ಮುಟ್ಟಿನ ದಿನಾಂಕದ ಬಗ್ಗೆ ಎಚ್ಚರಿಸುತ್ತದೆ. ಈ ಅಪ್ಲಿಕೇಶನ್‌ಗಳಿಂದ ಮಹಿಳೆಯರು ತಮ್ಮ ಮುಟ್ಟಿನ ದಿನಾಂಕವನ್ನು ಪ್ರತಿ ಸಲ ನೆನಪಿಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ. ತಮ್ಮ ಮುಟ್ಟಿನ ದಿನಾಂಕವನ್ನು ಅಪ್ಲಿಕೇಶನ್‌ಗಳಲ್ಲಿ ನೋಟ್ ಮಾಡಿಟ್ಟುಕೊಂಡರೆ, ಮುಂದಿನ ತಿಂಗಳಿನಲ್ಲಿ ಅವು ಮಹಿಳೆಯರಿಗೆ ನೆನಪಿಸುತ್ತದೆ. ಇದನ್ನೂ ಓದಿ: 41,652 ಮಂದಿಗೆ ಲಸಿಕೆ – 767 ಡಿಸ್ಚಾರ್ಜ್

ಪೀರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳಲ್ಲಿ ಮುಟ್ಟಿನ ದಿನಾಂಕವನ್ನು ನಮೂದಿಸುವ ಅವಕಾಶದೊಂದಿಗೆ ಇತರ ವೈಯಕ್ತಿಕ ಡೇಟಾಗಳನ್ನೂ ನಮೂದಿಸಬಹುದಾಗಿದೆ. ಇದರಿಂದ ಮಹಿಳೆಯರ ಸಂಗ್ರಹವಾಗುವ ಡೇಟಾಗಳು ಕಾನೂನು ಜಾರಿಯಿಂದ ಪ್ರವೇಶಿಸುವ ಸಾಧ್ಯತೆಯೂ ಇದ್ದು, ಒಂದು ವೇಳೆ ಕಾನೂನು ಬಾಹಿರವಾಗಿ ಮಹಿಳೆಯರು ಗರ್ಭಪಾತ ಮಾಡಿಸಿಕೊಂಡಲ್ಲಿ ತನಿಖೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.

ಈ ಹಿನ್ನೆಲೆ ಪೀರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳನ್ನು ಹಾಗೂ ವೈಯಕ್ತಿಕ ಡೇಟಾಗಳನ್ನು ಅಳಿಸಿ ಹಾಕಲು ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ಗರ್ಭಪಾತವಾಗಿರುವುದು ತಿಳಿದು ಬಂದಲ್ಲಿ ತನಿಖೆಯಾಗುವ ಭೀತಿಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಇದೇ ವರ್ಷ ಬರಲಿದೆ ಇ-ಪಾಸ್‌ಪೋರ್ಟ್ – ಹೇಗಿರಲಿದೆ? ಕೆಲಸ ಹೇಗೆ?

ಕಳೆದ ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದ ಸಾಂವಿಧಾನಿಕ ಹಕ್ಕೆಂದು ಘೋಷಿಸಲಾಗಿದ್ದ 1973ರ ತೀರ್ಪನ್ನು ರದ್ದುಗೊಳಿಸಿತ್ತು. ಇದನ್ನು ದೇಶಾದ್ಯಂತ ಮಹಿಳೆಯರು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.

ಗೂಗಲ್ ಹೊರತುಪಡಿಸಿ, ಮೆಟಾ, ಅಮೆಜಾನ್, ಮೈಕ್ರೋಸಾಫ್ಟ್, ಟೆಸ್ಲಾ ಹಾಗೂ ಇತರ ದೈತ್ಯ ಟೆಕ್ ಕಂಪನಿಗಳು ಸುಪ್ರೀಂ ಕೋರ್ಟ್ನ ಆದೇಶವನ್ನು ತಿರಸ್ಕರಿಸಿದೆ. ತಮ್ಮ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತಕ್ಕೆ ಸಹಾಯ ಮಾಡಲು ವಿದೇಶ ಪ್ರಯಾಣಕ್ಕೆ ಪಾವತಿಸುವ ಯೋಜನೆಯನ್ನು ಘೋಷಿಸಿದೆ.

Live Tv

Comments

Leave a Reply

Your email address will not be published. Required fields are marked *