ಕುಸಿದ ಪಾದಚಾರಿ ಮಾರ್ಗ ಸಿಂಕ್‍ಹೋಲ್‍ನಲ್ಲಿ ಸಿಲುಕಿದ ಮಹಿಳೆ- ವಿಡಿಯೋ ವೈರಲ್

ಬೀಜಿಂಗ್: ಚೀನಾದ ಲಾನ್ಝೌ ನಗರದಲ್ಲಿ ಸೈಡ್‍ವಾಕ್ (ಪಾದಚಾರಿ ಮಾರ್ಗ) ಕುಸಿದು ಪಾದಾಚಾರಿ ಮಹಿಳೆಯು ಸಿಂಕ್‍ಹೋಲ್‍ನಲ್ಲಿ ಬಿದ್ದಿದ್ದಾರೆ. ಈ ದೃಶ್ಯ ಮಳಿಗೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆಯು ಸೈಡ್‍ವಾಕ್ ಮೇಲೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಸೈಡ್‍ವಾಕ್ ಕುಸಿದ ಪರಿಣಾಮ ಆಕೆ ನೇರವಾಗಿ ಸಿಂಕ್‍ಹೋಲ್ ಒಳಗೆ ಬೀಳುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನವೆಂಬರ್ 11 ರಂದು ಈ ಘಟನೆ ನಡೆದಿದ್ದು, ಈ ದೃಶ್ಯವು ಚೈನೀಸ್ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಆಕಸ್ಮಿಕವಾಗಿ ನೆಲೆ ಕುಸಿದ ಪರಿಣಾಮ ಮಹಿಳೆಯ ತಲೆ ಕುಸಿಯುತ್ತಿರುವ ಕಲ್ಲಿಗೆ ಬಡಿದು ಆಕೆ ಗಾಯಗೊಂಡಿದ್ದಾರೆ. ಈ ಘಟನೆ ನಡೆದ ಮೇಲೆ ಅಕ್ಕಪಕ್ಕದಲ್ಲಿದ್ದವರು ಮಹಿಳೆಗೆ ಸಹಾಯಮಾಡಿ ಮೇಲೆ ಎತ್ತಿ, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಮಹಿಳೆಗೆ ಯಾವ ಗಂಭೀರ ಗಾಯ ಆಗದೇ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವರದಿಯಾಗಿದೆ.

ಘಟನೆ ಕುರಿತು ಲಾನ್ಹೌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಂಕ್‍ಹೋಲ್ ಕುಸಿಯಲು ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *