ಬಳ್ಳಾರಿ: ಶಬರಿಮಲೆ ಅಯ್ಯಪ್ಪಸ್ವಾಮಿಯ ದರ್ಶನ ಮಾಡುವ ವಿಚಾರ ಇದೀಗ ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿದ್ದರೆ, ಅಯ್ಯಪ್ಪಸ್ವಾಮಿಯಷ್ಟೇ ಪವರ್ ಪುಲ್ ಆಗಿರುವ ಕುಮಾರಸ್ವಾಮಿ ದರ್ಶನಕ್ಕೆ ಮಹಿಳೆಯರಿಗೆ ಅವಕಾಶವಿದ್ದರೂ ದರ್ಶನ ಮಾಡಲು ಭಯಪಡುತ್ತಿದ್ದಾರೆ.
ಬಳ್ಳಾರಿಯ ಸಂಡೂರು ಪಟ್ಟಣದಿಂದ 12 ಕಿ.ಮೀ ದೂರದಲ್ಲಿರುವ ಕುಮಾರಸ್ವಾಮಿ ದೇವಾಲಯ ಇದಾಗಿದ್ದು, ಈ ದೇವಾಲಯವನ್ನು ಕಾರ್ತಿಕೇಯ ಸ್ವಾಮಿ, ಸುಬ್ರಮಣ್ಯಸ್ವಾಮಿ, ಷಣ್ಮುಖಸ್ವಾಮಿ, ನವಿಲು ಸ್ವಾಮಿ ದೇವಸ್ಥಾನ ಎಂದು ಕರೆಯುತ್ತಾರೆ. ಇಲ್ಲಿ ತಾರಕಾಸುರ ವಧೆ ಮಾಡಲು ಕುಮಾರಸ್ವಾಮಿ ಬಂದು ನೆಲೆಸಿದ ಬೀಡು ಎಂಬ ಪ್ರತೀತಿ ಇದೆ. ಚಾಲುಕ್ಯರು 8ನೇ ಶತಮಾನದಲ್ಲಿ ಈ ದೇವಸ್ಥಾನ ನಿರ್ಮಿಸಿದ್ದಾರೆ. ದೇವಾಲಯದಲ್ಲಿ ಕುಮಾರಸ್ವಾಮಿಯ ದರ್ಶನಕ್ಕೆ ಮಹಿಳೆಯರಿಗೂ ಮುಕ್ತ ಅವಕಾಶವಿದ್ದು, ಆದರೆ ಮಹಿಳೆಯರು ದರ್ಶನ ಮಾಡಲು ಭಯಪಡುತ್ತಾರೆ.

ಮಹಿಳೆಯರು ದೇವರ ದರ್ಶನಕ್ಕೆ ಹಿಂದೇಟು ಹಾಕಲು ಒಂದು ಐತಿಹಾಸಿಕ ಕಾರಣವೂ ಇದೆ. ಹಿಂದೆ ಕುಮಾರಸ್ವಾಮಿ ತಾಯಿ ಪಾರ್ವತಿ ಮಗನಿಗೆ ವಿವಾಹ ಮಾಡಲು ಕನ್ಯಾಕುಮಾರಿಯಲ್ಲಿ ವಧು ನೋಡಿ ಬಂದಿರುತ್ತಾರೆ. ಆಗ ಕಾರ್ತಿಕೇಯ ಹುಡುಗಿ ಯಾರ ಥರಾ ಇದ್ದಾಳೆಂದು ಕೇಳಿದಾಗ ನನ್ನ ಹಾಗೆ ಇದ್ದಾಳೆ ಅಂತಾ ತಾಯಿ ಪಾರ್ವತಿ ಹೇಳ್ತಾರೆ. ಆಗ ಕುಮಾರಸ್ವಾಮಿ ನಾನು ಅವಳನ್ನ ಮದುವೆಯಾಗಲ್ಲ. ನಿನ್ನ ಸ್ವರೂಪದಂತೆ ಇದ್ದರೆ ಅವಳು ನನಗೆ ಮಾತೃ ಸಮಾನಳು, ನಾನು ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ ಎಂದು ಹೇಳಿದ್ದರಂತೆ. ಹೀಗಾಗಿ ಮಹಿಳೆಯರು ಕುಮಾರಸ್ವಾಮಿ ದರ್ಶನಕ್ಕೆ ಹಿಂಜರಿಯುತ್ತಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇತ್ತ ಶಬರಿಮಲೆ ದರ್ಶನಕ್ಕೆ ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಅವಕಾಶ ಕೊಟ್ಟಿದ್ದು, ನೂರಾರು ಮಹಿಳೆಯರು ಅಯ್ಯಪ್ಪಸ್ವಾಮಿಯ ದರ್ಶನ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಇದಕ್ಕೆ ಅಷ್ಟೇ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಬಳ್ಳಾರಿಯ ಕುಮಾರಸ್ವಾಮಿ ದೇವರ ದರ್ಶನಕ್ಕೆ ಮಹಿಳೆಯರು ಮುಕ್ತ ಅವಕಾಶವಿದ್ದರು ಜನರ ನಂಬಿಕೆ ಇಂದ ದೇವರ ದರ್ಶನಕ್ಕೆ ಮಹಿಳೆಯರು ಭಯಪಡುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

https://www.youtube.com/watch?v=_if1rv2FprI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply