ಡ್ರಿಂಕ್ಸ್‌ ಮಾಡಲು ಪತಿಯನ್ನು ಕರೆದುಕೊಂಡು ಹೋಗುತ್ತಿದ್ದನೆಂದು ಬಾವನನ್ನೇ ಕೊಂದಳು!

crime

ನವದೆಹಲಿ: ಬಾವನ ಕೊಂದ ಆರೋಪದಡಿ 35 ವರ್ಷದ ಮಹಿಳೆ ಮತ್ತು ಆಕೆಯ ಸಹೋದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ದುರ್ದೈವಿಯನ್ನು ಇಕ್ರಾರ್ ಹುಸೇನ್(47) ಎಂದು ಗುರುತಿಸಲಾಗಿದ್ದು, ಈತ ದೆಹಲಿಯ ನಿವಾಸಿ ಸಿಕಂದರ್‍ಪುರದ ಸ್ಕ್ರ್ಯಾಪ್ ಯಾರ್ಡ್‍ನಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಫೆಬ್ರವರಿ 1ರಂದು ಗುರ್ಗಾಂವ್-ಫರಿದಾಬಾದ್ ರಸ್ತೆಯ ಖುಷ್ಬೂ ಚೌಕ್ ಬಳಿಯ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವ್ಯಕ್ತಿಯ ಮರಣೋತ್ತರ ಪರೀಕ್ಷೆ ವೇಳೆ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್

ಇದೀಗ ಮೃತ ವ್ಯಕ್ತಿಯ ಸಹೋದರನ ದೂರಿನ ಮೇರೆಗೆ ಸುಶಾಂತ್ ಲೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಕ್ರಾನ್ ಅವರನ್ನು ಅವರ ಅತ್ತಿಗೆಯೇ ಸ್ಕ್ರ್ಯಾಪ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಹೀಮ್ ಅಲ್ವಿ ಅಕಾ ಮುಸ್ರಫ್ ಜೊತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

POLICE JEEP

ಈ ಪ್ರಕರಣ ಕುರಿತಂತೆ ತನಿಖೆ ವೇಳೆ ಮಹಿಳೆ ಇಕ್ರಾರ್ ತಮ್ಮ ವ್ಯವಹಾರಗಳ ಮಧ್ಯೆ ಪ್ರವೇಶಿಸಿದ್ದರಿಂದ ತಾನು ಮತ್ತು ತನ್ನ ಪತಿ ಬೇರೆಯಾಗಿದ್ದೆವು. ತಮ್ಮ ಪತಿ ಕೆಲಸದ ನಿಮಿತ್ತ ಎರಡು ವರ್ಷಗಳ ಕಾಲ ಮನೇಸರ್‌ಗೆ ತೆರಳಿದ್ದರು ಮತ್ತು ಅಪರೂಪಕ್ಕೆ ತನ್ನನ್ನು ಭೇಟಿ ಮಾಡಲು ಬರುತ್ತಿದ್ದರು. ಅಲ್ಲದೇ ತಮ್ಮ ಪತಿಯನ್ನು ಇಕ್ರಾನ್ ಪದೇ, ಪದೇ ಡ್ರಿಂಕ್ಸ್ ಮಾಡುವುದಕ್ಕೆ ಕರೆದುಕೊಂಡು ಹೋಗುತ್ತಿದ್ದ. ಇದರಿಂದ ತಮ್ಮ ಪತಿ ತನ್ನಿಂದ ಮತ್ತಷ್ಟು ದೂರ ಆದರು ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಹಿಜಬ್‍ ಹೆಸರಿನಲ್ಲಿ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಕಸಿದುಕೊಳ್ಳುತ್ತಿದ್ದೇವೆ: ರಾಗಾ

ಮಹಿಳೆ ಹಾಗೂ ಆಕೆಯ ಪತಿ ಜಗಳವಾಡಿದ್ದರು. ಇದಕ್ಕೆ ಕಾರಣ ತನ್ನ ಬಾವ ಎಂದು ದೂಷಿಸಿ, ಆತನನ್ನು ಕೊಂದರೆ ಪತಿಯ ಜೊತೆಗೆ ಇರಬಹುದು ಎಂದು ಭಾವಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ. ತನ್ನ ಸಹೋದ್ಯೋಗಿ ನಹೀಮ್ ಅವರ ಬಳಿ ಸಹಾಯ ಕೇಳಿದ್ದಾಳೆ. ನಂತರ ನಹೀಮ್ ಮೋಟರ್ ಬೈಕ್‍ನಲ್ಲಿ ಗುರ್ಗಾಂವ್ ಫರೀದಾಬಾದ್ ರಸ್ತೆಗೆ ಇಕ್ರಾನ್‍ರನ್ನು ಕರೆದುಕೊಂಡು ಹೋಗಿ ಮಫ್ಲರ್‌ನಿಂದ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *