ಮಹಿಳೆಯರೇ ಎಚ್ಚರ! ರೈಲಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಯಾಮಾರಿದ್ರೆ ಮಾಂಗಲ್ಯ ಸರವನ್ನೇ ಎಗರಿಸ್ತಾರೆ

ಬಳ್ಳಾರಿ: ರೈಲಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಯಾಮಾರಿದ್ರೆ ಸಾಕು ಮಹಿಳೆಯರ ಮಾಂಗಲ್ಯ ಸರ ಎಗರಿಸುತ್ತಾರೆ. ಅಂತಹದೊಂದು ಘಟನೆ ಬೆಂಗಳೂರಿನಿಂದ ಬಳ್ಳಾರಿಗೆ ಹೊರಟಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.

ಬಳ್ಳಾರಿಯ ರೇಡಿಯೋ ಪಾರ್ಕ್ ನಿವಾಸಿ ಪ್ರಮೀಳಾ ಎಂಬವರು ಸೋಮವಾರ ರಾತ್ರಿ ತಾಯಿಯೊಂದಿಗೆ ಬೆಂಗಳೂರಿನಿಂದ ಬಳ್ಳಾರಿಗೆ ರೈಲಿನಲ್ಲಿ ತೆರೆಳುತ್ತಿದ್ದರು. ರೈಲಿನ ಎಸ್ 6 ರಿಸರ್ವೇಷನ್ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದು, ತಮ್ಮ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಕಳ್ಳರು ಬಂದು ಏಕಾಏಕಿ 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ತಕ್ಷಣ ಪ್ರಮೀಳಾ ರೈಲಿನಲ್ಲಿದ್ದ ಆರ್‍ಪಿಎಫ್ ಪೊಲೀಸರಿಗೆ ಹಾಗೂ ಟಿಸಿಗೆ ದೂರು ನೀಡಿದ್ದಾರೆ. ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ನೀವು ಕರ್ನಾಟಕದವರು, ಗೌರಿಬಿದನೂರು ಬಳಿ ನಿಮ್ಮ ಮಾಂಗಲ್ಯ ಕಳ್ಳತನವಾಗಿದೆ. ಕರ್ನಾಟಕದಲ್ಲೇ ದೂರು ನೀಡಿ ಅಂತಾ ಆರ್‍ಪಿಎಫ್ ಪೊಲೀಸರು ನಿರ್ಲಕ್ಷ್ಯದಿಂದ ಉತ್ತರ ನೀಡಿದ್ದಾರೆ. ಹೀಗಾಗಿ ರಾತ್ರಿಯೀಡಿ ಪ್ರಮೀಳಾ ದೂರು ನೀಡಲು ಪರದಾಡಿದ್ದಾರೆ. ಅಲ್ಲದೇ ಅವರ ಸಂಬಂಧಿಕರೊಬ್ಬರು ಆರ್‍ಪಿಎಫ್ ಸುರಕ್ಷಾ ವಾಣಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಅಸಭ್ಯವಾಗಿ ಮಾತನಾಡಿದ್ದಾರೆ.

ಪ್ರಮೀಳಾರವರ ಸಂಬಂಧಿಕರು ರೈಲ್ವೇ ಸಚಿವರಿಗೆ ಈ ಬಗ್ಗೆ ಟ್ಟೀಟ್ ಮಾಡಿ ಪ್ರಕರಣದ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಪ್ರತಿಕ್ರಿಯಿಸಿ ಅಂತ ರೈಲ್ವೆ ಇಲಾಖೆ ಕೂಡ ಟ್ವೀಟ್ ಮಾಡಿದೆ.

ರೈಲಿನಲ್ಲಿ ಮಹಿಳೆಯರು ಪ್ರಯಾಣಿಸುವಾಗ ರಕ್ಷಣೆ ಇಲ್ಲದಂತಾಗಿದೆ ಎಂದು ಮಾಂಗಲ್ಯ ಸರ ಕಳೆದುಕೊಂಡು ಪ್ರಮೀಳಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *