ಕಳ್ಳರಿಂದ ಬ್ಯಾಗ್ ಬಚಾವ್ ಮಾಡಲು ಚಲಿಸ್ತಿದ್ದ ಆಟೋದಿಂದ ಬಿದ್ದ ಮಹಿಳೆ- 12 ದಿನಗಳ ನಂತರ ಸಾವು

ನವದೆಹಲಿ: ಮಹಿಳೆಯೊಬ್ಬರು ಆಟೋದಲ್ಲಿ ಚಲಿಸುತ್ತಿದ್ದ ವೇಳೆ ಕಳ್ಳರು ಬ್ಯಾಗ್ ಕದಿಯಲು ಯತ್ನಿಸಿದ್ದಾರೆ. ಈ ವೇಳೆ ಬ್ಯಾಗ್ ಬಚಾವ್ ಮಾಡಿಕೊಳ್ಳುವ ಸಂದರ್ಭದಲ್ಲಿ ರಿಕ್ಷಾದಿಂದ ಬಿದ್ದು ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. 40 ವರ್ಷದ ಮಹಿಳೆ 12 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಮನೀಷ್ (41) ಮತ್ತು ಮೋಹಿತ್ ಗುಪ್ತಾ (34) ಬಂಧಿತರಾಗಿದ್ದಾರೆ. ಇವರು ಪತ್ಪಗರ್ಂಜ್ ನಿವಾಸಿಗಳನ್ನು ಗುರುತಿಸಿದ್ದಾರೆ. ಚಲಿಸುತ್ತಿರುವ ರಿಕ್ಷಾದಲ್ಲಿ ಮಹಿಳೆಯ ಚೀಲವನ್ನು ಕಸಿದುಕೊಂಡ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

ಪೊಲೀಸರ ಪ್ರಕಾರ, ಫೆಬ್ರವರಿ 7 ರಂದು ಕಳ್ಳರಿಂದ ಬ್ಯಾಗ್ ಕಾಪಾಡಿಕೊಳ್ಳುವ ಸಮಯದಲ್ಲಿ ಮಹಿಳೆಯ ತಲೆಗೆ ತೀವ್ರ ಗಾಯವಾಗಿತ್ತು. ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದರು ಮತ್ತು ಗಂಭೀರ ಸ್ಥಿತಿಯಲ್ಲಿದ್ದರು. ಮಹಿಳೆಯನ್ನು ಹೆಡ್ಗೆವಾರ್ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಪತ್ಪಗರ್ಂಜ್‍ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಯುವಕನ ಕೊಲೆ ಪ್ರಕರಣ- ಓರ್ವ ಆರೋಪಿ ವಶಕ್ಕೆ, ನಾಲ್ವರಿಗಾಗಿ ಹುಡುಕಾಟ

ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ನೋಡಿ ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿತ್ತು. ಒಂದು ದಿನ ಅಕ್ಷರಧಾಮ ಕಡೆಯಿಂದ ಇಬ್ಬರು ಆರೋಪಿಗಳು ಮೋಟಾರ್ ಬೈಕ್ ಬರುತ್ತಿದ್ದರು. ಇದನ್ನು ಗಮನಿಸಿ ಪೊಲೀಸ್ ಅಧಿಕಾರಿಗಳ ತಂಡವು ದ್ವಿಚಕ್ರ ವಾಹನವನ್ನು ಹಿಂಬಾಲಿಸಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಆರ್ ಸತ್ಯಸುಂದರಂ ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *