ಗೆಳತಿಯನ್ನು ಮದುವೆಯಾಗಲು ಲಿಂಗವನ್ನೇ ಬದಲಾಯಿಸಿಕೊಂಡ ಮಹಿಳೆ

ಭೋಪಾಲ್: ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲೊಂದು (Indore) ಅಪರೂಪದ ವಿವಾಹ ನಡೆದಿದೆ. ಇಂದೋರ್‌ನ ಸೋನಿ ಎಂಬ ಮಹಿಳೆ ತನ್ನ ಬಹುಕಾಲದ ಗೆಳತಿಯನ್ನು ವಿವಾಹವಾಗಲು (Marriage) ತನ್ನ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾರೆ.

ಸೋನಿ ಹೆಣ್ಣಾಗಿ ಹುಟ್ಟಿದ್ದರೂ ವರ್ಷಗಳ ಬಳಿಕ ಪುರುಷನಾಗಿ ಬದುಕಲು ಪ್ರಾರಂಭಿಸಿದರು. ತಮ್ಮ 47ನೇ ಹುಟ್ಟುಹಬ್ಬಕ್ಕೆ ಲಿಂಗ ರೂಪಾಂತರ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದೀಗ ಸೋನಿ ತಮ್ಮ ಹೆಸರನ್ನು ಅಲ್ಕಾ ಎಂದು ಬದಲಾಯಿಸಿಕೊಂಡು ಬಹುಕಾಲದ ಗೆಳತಿ ಆಸ್ತಾ ಅವರನ್ನು ವರಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಟ್ರಾನ್ಸ್‌ಜೆಂಡರ್ (Transgender) ವ್ಯಕ್ತಿ ಭಿನ್ನಲಿಂಗೀಯ ವ್ಯಕ್ತಿಯೊಂದಿಗಿನ ವಿವಾಹವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ತೀರ್ಪು ನೀಡಿದ ಬಳಿಕ ಜೋಡಿ ಒಂದಾಗಿದ್ದಾರೆ. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – ಬೆಂಗಳೂರು, ಹೈದರಾಬಾದ್ ಬಳಿಕ ಅಹಮದಾಬಾದ್‍ನ ಎಫ್‍ಎಸ್‍ಎಲ್‍ಗೆ ಮೊಬೈಲ್ ರವಾನೆ

ವಿಶೇಷ ವಿವಾಹ ಕಾಯ್ದೆಯಡಿ ಜೋಡಿ ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ಅಲ್ಕಾ ಮತ್ತು ಆಸ್ತಾ ಮದುವೆಯಾಗಿದ್ದು, ವಿಶೇಷವೆಂದರೆ ಈ ಸಮಾರಂಭದಲ್ಲಿ ಎರಡೂ ಕಡೆಯ ಕುಟುಂಬದವರೂ ಭಾಗಿಯಾಗಿದ್ದರು. ಇದನ್ನೂ ಓದಿ: ಬೆಂಗಳೂರು, ಮಹಾರಾಷ್ಟ್ರದಲ್ಲಿ ಎನ್‌ಐಎ ದಾಳಿ, 15 ಮಂದಿ ಅರೆಸ್ಟ್‌ – 51 ಹಮಾಸ್‌ ಧ್ವಜ, ಪಿಸ್ತೂಲ್‌, ಗನ್‌, ಮಾರಕಾಸ್ತ್ರಗಳು ಜಪ್ತಿ