ಅತ್ತೆ, ನಾದಿನಿ ಕಾಟ ತಡೆಯಲಾರದೇ ನಗ್ನವಾಗಿ ಠಾಣೆಗೆ ಬಂದ ಮಹಿಳೆ!

ಜೈಪುರ: ಅತ್ತೆ ಮತ್ತು ನಾದಿನಿಯ ಕಿರುಕುಳ ತಾಳಲಾರದೇ ಮಹಿಳೆಯೊಬ್ಬರು ನಗ್ನವಾಗಿಯೇ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಬಂದ ಮನಕಲಕುವ ಘಟನೆಯೊಂದು ರಾಜಸ್ಥಾನದ ಚಿರು ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಚುರು ಜಿಲ್ಲೆಯ ಬಿದಸರ್ ಪ್ರದೇಶದಲ್ಲಿ ನಡೆದಿದೆ. ಮಹಿಳೆ ಮಹಾರಾಷ್ಟ್ರದ ಅಕೋಲ ನಿವಾಸಿಯಾಗಿದ್ದು, ಮದುವೆಯ ಬಳಿಕ ಚುರುವಿನಲ್ಲಿ ಪತಿ ಜೊತೆ ನೆಲೆಸಿದ್ದರು. ಪತಿ ಅಸ್ಸಾಮಿನಲ್ಲಿ ಕಾರ್ಮಿಕರಾಗಿದ್ದಾರೆ. ಸದ್ಯ ಸಂತ್ರಸ್ತೆ ನೀಡಿದ ದೂರಿನಂತೆ ಎಫ್‍ಐಆರ್ ದಾಖಲಾಗಿದ್ದು, ಸಂಬಂಧಿಕರನ್ನು ಬಂಧಿಸಲಾಗಿದೆ.

ಪತಿ ಮನೆಯಲ್ಲಿ ಇಲ್ಲದಾಗ ಸಂತ್ರಸ್ತೆಗೆ ಅತ್ತೆ, ಸೊಸೆ ಕಿರುಕುಳ ನೀಡುತ್ತಿದ್ದರು. ಇದೇ ವೇಳೆ ಅಲ್ಲಿದ್ದ ಇತರರು ಸಂತ್ರಸ್ತೆಗೆ ಸಹಾಯ ಮಾಡಲು ಬದಲು ತಮ್ಮ ಮೊಬೈಲ್ ನಲ್ಲಿ ಆಕೆಯ ಫೋಟೋ ಮತ್ತು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗುತ್ತಿದ್ದರು.

ಅತ್ತೆ ಹಾಗೂ ನಾದಿನಿ ಮಹಿಳೆ ಜೊತೆ ಕ್ಲುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಗಲಾಟೆ ತಾರಕಕ್ಕೇರಿ ಇಬ್ಬರು ಸೇರಿ ಸಂತ್ರಸ್ತೆಯ ಬಟ್ಟೆ ಬಿಚ್ಚಿದ್ದಾರೆ. ಇದರಿಂದ ನೊಂದ ಸಂತ್ರಸ್ತೆ ನಗ್ನವಾಗಿಯೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಮಹಿಳೆಯನ್ನು ಕಂಡ ಪೊಲೀಸರು ಗಾಬರಿಯಾಗಿದ್ದು, ಆಕೆಗೆ ರಕ್ಷಣೆ ನೀಡಿ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈಕೆ ನಗ್ನವಾಗಿ ಪೊಲೀಸ್ ಠಾಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಸಿಕ್ಕವರು ತಮ್ಮ ಮೊಬೈಲ್ ನಲ್ಲಿ ಮಹಿಳೆಯ ಫೋಟೋ ಹಾಗೂ ವಿಡಿಯೋ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಎಸ್‍ಪಿ ಸೀತಾರಾಮ್ ತಿಳಿಸಿದ್ದಾರೆ.

ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾದ ಸಂತ್ರಸ್ತೆಯ ದೃಶ್ಯವನ್ನು ಡಿಲೀಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಿಕ್ಕಿ ಹರಿದಾಡಬಾರದೆಂಬ ಉದ್ದೇಶದಿಂದ ಅದನ್ನು ಡಿಲೀಟ್ ಮಾಡಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದವರ ಹಾಗೂ ಆಕೆಯ ಫೋಟೋ ಹಾಗೂ ವಿಡಿಯೋ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್‍ಪಿ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *