ನಿರಂತರವಾಗಿ ಮೊಬೈಲ್ ಬಳಕೆ ಮಾಡುವವರೇ ಹುಷಾರ್!

ಬೀಜಿಂಗ್: ಇಂದಿನ ಯುವಜನಾಂಗ ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಬಳಕೆ ಮಾಡುವುದರಲ್ಲೇ ಕಳೆದು ಬಿಡುತ್ತಾರೆ. ಮೊಬೈಲ್ ಜಾಸ್ತಿ ನೋಡಬಾರದು ಅಂತ ಹಿರಿಯರು ಹೇಳಿದ್ರೂ, ಇಂದಿನ ಯುವಕ-ಯುವತಿಯರು ಅದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಅತೀ ಹೆಚ್ಚು ಸ್ಮಾರ್ಟ್ ಫೋನ್ ಬಳಸಿದ್ರೆ ಏನು ಅನಾಹುತ ಸಂಭವಿಸುತ್ತೆ ಎಂಬುದಕ್ಕೆ ಚೀನಾದಲ್ಲಿ ನಡೆದ ಘಟನೆಯೇ ಸಾಕ್ಷಿ.

ಹೌದು. ಚೀನಾದ ಮಹಿಳೆಯೊಬ್ಬರು ಒಂದು ದಿನ ನಿರಂತರವಾಗಿ ಮೊಬೈಲ್ ಬಳಕೆ ಮಾಡಿದ್ದರಿಂದ ಅವರ ಕೈ ಬೆರಳುಗಳನ್ನು ಅಲುಗಾಡಿಸಲು ಸಾಧ್ಯವಾಗದೇ ಪರದಾಡಿದ ಘಟನೆ ನಡೆದಿದೆ. ಈ ಘಟನೆ ಚೀನಾದ ಛಾಂಗ್‍ಶಾ ಎಂಬಲ್ಲಿ ನಡೆದಿದೆ. ಸದ್ಯ ಮಹಿಳೆಯ ಚಿಕಿತ್ಸೆಪಡೆದುಕೊಂಡಿದ್ದು, ಇದೀಗ ಕೈ ಬೆರಳುಗಳು ಸಹಜ ಸ್ಥಿತಿಗೆ ಬಂದಿವೆ. ಮಹಿಳೆಯು ವೈದ್ಯರ ಬಳಿಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವಿಡಿಯೋ ಕೂಡ ಇದೆ.

ವಿಡಿಯೋದಲ್ಲೇನಿದೆ?:
ನಿರಂತರವಾಗಿ ಕೆಲಸ ಮಾಡಿದ್ದ ಮಹಿಳೆ ಒಂದು ದಿನ ವೀಕ್ ಆಫ್(ವಾರದ ರಜೆ) ತೆಗೆದುಕೊಂಡಿದ್ದಾರೆ. ಆದ್ರೆ ಆ ದಿನ ಆಕೆ ಇಡೀ ದಿನ ಫೋನ್ ನಲ್ಲೇ ಕಳೆದಿದ್ದಾಳೆ. ಮಲಗುವ ಸಮಯದಲ್ಲಿ ಮಾತ್ರ ಆಕೆ ಫೋನ್ ನಿಂದ ದೂರ ಉಳಿದಿದ್ದಾಳೆ. ಇದಾದ ಕೆಲ ದಿನಗಳ ಬಳಿಕ ಬಲ ಗೈ ಬೆರಳುಗಳಲ್ಲಿ ನೋವು ಕಾಣಿಸಿಕೊಂಡಿದೆ. ಅಲ್ಲದೇ ಬೆರಳುಗಳನ್ನು ಅಲುಗಾಡಿಸಲು ಸಾಧ್ಯವಾಗದಿರುವುದು ಆಕೆಯ ಗಮನಕ್ಕೆ ಬಂದಿದೆ. ಬೆರಳುಗಳು ಮೊಬೈಲ್ ಹಿಡಿದಂತೆಯೇ ಇದ್ದು, ಅವುಗಳನ್ನು ಬಾಗಿಸಲು ಸಾಧ್ಯವಾಗದಂತೆ ಮರಗಟ್ಟಿ ಹೋಗಿದ್ದವು.

ಇದರಿಂದ ಗಾಬರಿಗೊಂಡ ಮಹಿಳೆ ನೇರವಾಗಿ ವೈದ್ಯರ ಬಳಿ ತೋರಿಸಲು ತೆರಳಿದ್ದಾರೆ. ಈ ವೇಳೆ ಟೆನೋಸಿನೋವಿಟಿಸ್ ನಿಂದ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂತರ ವೈದ್ಯರು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಹಿಳೆಯ ಕೈ ಬೆರಳುಗಳು ಸಹಜ ಸ್ಥಿತಿಗೆ ಬಂದಿದೆ. ಮಹಿಳೆ ಇನ್ಮುಂದೆ ಮೊಬೈಲ್ ಜಾಸ್ತಿ ಬಳಸಲ್ಲ ಎಂದು ವರದಿಯಾಗಿದೆ.

ಏನಿದು ಟೆನೋಸಿನೋವಿಟಿಸ್? :
ಟೆಂಡೊನೈಟಿಸ್ / ಟೆನೋಸಿನೋವಿಟಿಸ್ – ಮೊಣಕಾಲು, ಪುನರಾವರ್ತಿತ ಚಲನೆಯ ನಿರಂತರವಾದ ಹೈಪರ್ ಎಕ್ಸ್ಟೆನ್ಶನ್ ಮತ್ತು ದೀರ್ಘಾವಧಿಯ ಲೋಡ್ ಮಿತಿಮೀರಿದ ಬಳಕೆಯಿಂದಾಗಿ ಈ ಸಮಸ್ಯೆ ಕಾಣಿಸುತ್ತದೆ. ಕೈಯಲ್ಲಿ ಮರಗಟ್ಟುವಿಕೆ, ನೋವು ಮತ್ತು ಊತ ಆಗುವುದು ಈ ರೋಗದ ಪ್ರಮುಖ ಲಕ್ಷಣಗಳು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.facebook.com/pearvideocn/videos/2166738133577222/

Comments

Leave a Reply

Your email address will not be published. Required fields are marked *