ಸಹಾಯಕ ಸಬ್ ಇನ್ಸ್ ಪೆಕ್ಟರ್‍ಗೆ ನಡುರಸ್ತೆಯಲ್ಲೇ ಮಹಿಳೆಯಿಂದ ಕಪಾಳಮೋಕ್ಷ!- ವೈರಲ್ ವಿಡಿಯೋ

ಅಹಮದಾಬಾದ್: ಮಹಿಳೆಯೊಬ್ಬರು ಸಹಾಯಕ ಸಬ್ ಇನ್ಸ್ ಪೆಕ್ಟರ್‍ಗೆ ನಡರಸ್ತೆಯಲ್ಲೇ ಎಲ್ಲರೆದುರು ಥಳಿಸಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಇಲ್ಲಿನ ಒಧಾವ್ ಪೊಲಿಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಅಮೃತ್‍ಜೀ ಕುಡಿದ ಮತ್ತಿನಲ್ಲಿ ತರಕಾರಿ ಮಾರುವ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಆಕೆಯಿಂದ ಹಿಗ್ಗಾಮುಗ್ಗಾ ಏಟು ತಿಂದಿದ್ದಾರೆ. ಮಹಿಳೆ ಸಮವಸ್ತ್ರದಲ್ಲಿದ್ದ ಪೊಲೀಸ್‍ಗೆ ಬಾರಿಸುತ್ತಿದ್ರೆ ಸ್ಥಳದಲ್ಲಿದ್ದವರು ಕೂಡ ಪೊಲೀಸ್‍ಗೆ ಛೀಮಾರಿ ಹಾಕಿ, ಮಹಿಳೆಯನ್ನು ಬೆಂಬಲಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಚ್ಚೆತ್ತ ನಗರದ ಪೊಲೀಸರು, ಸೋಮವಾರ ಸಂಜೆ ಅಮೃತ್‍ಜೀಯನ್ನ ಬಂಧಿಸಿದ್ದಾರೆ. ಅಮೃತ್‍ಜೀಯನ್ನು ಸದ್ಯಕ್ಕೆ ಅಮಾನತು ಮಾಡಲಾಗಿದ್ದು, ವೀಡಿಯೋದಲ್ಲಿರುವ ಮಹಿಳೆಯಿಂದ ದೂರು ಪಡೆಯಲು ಆಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ವಗೇಲಾದ ಪೊಲೀಸ್ ಜಂಟಿ ಆಯುಕ್ತರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

https://www.youtube.com/watch?v=b1XTBE8gQrA

Comments

Leave a Reply

Your email address will not be published. Required fields are marked *