15ರ ಅಪ್ರಾಪ್ತನ ಜೊತೆ 26 ವಯಸ್ಸಿನ ಆಂಟಿ ಶಿಕ್ಷಕಿ ಎಸ್ಕೇಪ್!

ಚಂಡೀಗಡ: 15 ವರ್ಷದ ಅಪ್ರಾಪ್ತನ ಜೊತೆ 26 ವಯಸ್ಸಿನ ಶಿಕ್ಷಕಿ ಓಡಿಹೋಗಿದ್ದರಿಂದ ಆಕೆಯನ್ನು ಪೊಲೀಸರು ಬಂಧಿಸಿರುವ ಘಟನೆ ಪಂಜಾಬ್ ನ ಫತೇಹಾಬಾದಿನಲ್ಲಿ ಸೋಮವಾರ ಈ ನಡೆದಿದೆ.

ಶಾಲೆಯಿಂದಲೇ 15 ವರ್ಷದ ಬಾಲಕ ಮತ್ತು 26 ವರ್ಷದ ಶಿಕ್ಷಕಿ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಬಳಿಕ ಶಾಲೆ ಎಲ್ಲ ಕಡೆ ಹುಡುಕಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಈ ಬಗ್ಗೆ ಎರಡು ಕುಟುಂಬದವರನ್ನು ಶಾಲೆಗೆ ಕರೆಸಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ.

ಬಾಲಕನ ತಂದೆ ನನ್ನ ಮಗ ಕಾಣೆಯಾಗಿದ್ದಾನೆ ಎಂದು ಫತೇಹಾಬಾದಿ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೇ ಆ ಶಿಕ್ಷಕಿ ವಿರುದ್ಧ ಅಪಹರಣ ಮತ್ತು ಹತ್ಯೆ ಪ್ರಕರಣವೂ ದಾಖಲಾಗಿತ್ತು. ನಮ್ಮ ಮಗನಿಗೆ ಶಿಕ್ಷಕಿ ಒತ್ತಡ ಹಾಕಿ ಮತ್ತು ಆಮಿಷ ಒಡ್ಡಿ ಕರೆದುಕೊಂಡು ಹೋಗಿದ್ದಾಳೆ ಎಂದು ಬಾಲಕನ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದರು.

ಬಾಲಕ ಮತ್ತು ಶಿಕ್ಷಕಿ ಯಾವಾಗಲೂ ಫೋನಿನ ಮೂಲಕ ಸಂಪರ್ಕದಲ್ಲಿರುತ್ತಿದ್ದರು. ಜೊತೆಗೆ ಇಬ್ಬರು ತಮ್ಮ ಮೊಬೈಲ್ ನಂಬರ್ ಕೂಡ ಬದಲಿಸಿಕೊಂಡಿದ್ದರು. ಫೇಸ್‍ಬುಕ್, ವಾಟ್ಸಪ್ ನಲ್ಲಿ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದರು ಎಂಬುದಾಗಿ ಪ್ರಾಥಮಿಕೆ ತನಿಖೆ ವೇಳೆ ತಿಳಿದು ಬಂದಿದೆ.

ಪೊಲೀಸರು ಈ ಬಗ್ಗೆ ತೀವ್ರವಾಗಿ ತನಿಖೆ ಮಾಡಿ ಫೋನಿನ ಮೂಲಕ ಇಬ್ಬರನ್ನು ಪತ್ತೆಹಚ್ಚಿದ್ದು, ಸೋಮವಾರ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆ ವೇಳೆ ಶಿಕ್ಷಕಿ ನಾನೇ ಕರೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮೊದಲು ಬಾಲಕನನ್ನು ಹಿಸ್ಸಾರ್ ಗೆ ಕರೆದುಕೊಂಡು ಹೋಗಿದ್ದಾಳೆ. ಬಳಿಕ ಅಲ್ಲಿಂದ ದೆಹಲಿಗೆ ಇಬ್ಬರು ಹೋಗಿದ್ದಾರೆ. ನಂತರ ಜಮ್ಮು ಕಾಶ್ಮೀರದ ಕತ್ರಾಗೆ ಹೋಗಿದ್ದಾರೆ. ಕೊನೆಗೆ ಬಾಲಕ ಕತ್ರಾದಲ್ಲಿ ಪತ್ತೆಯಾಗಿದ್ದಾನೆ ಎಂದು ಇನ್ಸ್ ಪೆಕ್ಟ್‍ರ್ ವಿವರಿಸಿದರು.

ಸದ್ಯಕ್ಕೆ ಇಬ್ಬರನ್ನು ವಶಕ್ಕೆ ಪಡೆದಿದ್ದು, ಬಾಲಕನನ್ನು ವೈದ್ಯಕೀಯ ಪರೀಕ್ಷಗೆ ಒಳಪಡಿಸುವುದಿಲ್ಲ. ಆದರೆ ಶಿಕ್ಷಕಿಯನ್ನು ಬಂಧಿಸಿದ್ದು, ಶೀಘ್ರವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *