ಬಿಜೆಪಿ ಶಾಸಕ ರಾಮ್‍ದಾಸ್ ಕಚೇರಿ ಎದುರು ಪ್ರೇಮಾಕುಮಾರಿ ಪ್ರತ್ಯಕ್ಷ

– ಪೊಲೀಸರ ಮಧ್ಯಪ್ರವೇಶ ಬಳಿಕ ಜಾಗ ಖಾಲಿ

ಮೈಸೂರು: ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಕಚೇರಿ ಮುಂದೆ ಇಂದು ಪ್ರೇಮ ಕುಮಾರಿ ಪ್ರತ್ಯಕ್ಷವಾಗಿದ್ದಾರೆ.

ಏಕಾಏಕಿ ಮೈಸೂರು ನಗರದ ವಿದ್ಯಾರಣ್ಯಪುರದಲ್ಲಿರೋ ಶಾಸಕ ರಾಮದಾಸ್‍ರ ಕಚೇರಿ ಮುಂಭಾಗ ಆಗಮಿಸಿದ ಪ್ರೇಮಾಕುಮಾರಿ, ಕಚೇರಿಯ ಮುಂಭಾಗ ಕೆಲ ಹೊತ್ತು ಕುಳಿತು ನನಗೆ ನ್ಯಾಯ ಬೇಕು ಅಂತ ಧರಣಿ ನಡೆಸಿದರು. ಆದರೆ ಈ ವೇಳೆ ಶಾಸಕರ ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಕಚೇರಿಗೆ ಬೀಗ ಹಾಕಲಾಗಿತ್ತು.

ಪೇಮಾಕುಮಾರಿ ಅವರು ಏಕಾಏಕಿ ಆಗಮಿಸಿ ಧರಣಿ ನಡೆಸುತ್ತಿರುವ ಮಾಹಿತಿ ಪಡೆದ ಪೊಲೀಸರು ತಕ್ಷಣ ರಾಮದಾಸ್ ಅವರ ಕಚೇರಿ ಬಳಿ ಆಗಮಿಸಿದರು. ಬಳಿಕ ಪ್ರೇಮಾ ಕುಮಾರಿ ಅವರ ಜೊತೆ ಮಾತುಕತೆ ನಡೆಸಿದ ಪೊಲೀಸರು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ವೇಳೆ ಈ ರೀತಿ ಪ್ರತಿಭಟನೆ ನಡೆಸುವುದು ಮುಖ್ಯವಲ್ಲ ಎಂದು ತಿಳಿಹೇಳಿದ್ದಾರೆ. ಬಳಿಕ ಪೊಲೀಸರ ಮಧ್ಯ ಪ್ರವೇಶದಿಂದ ಪ್ರೇಮಾ ಕುಮಾರಿ ಅವರು ಸ್ಥಳದಿಂದ ತೆರಳಿದ್ದಾರೆ.

https://www.youtube.com/watch?v=CTih6IweDE0

Comments

Leave a Reply

Your email address will not be published. Required fields are marked *