Love Reddy: ಥಿಯೇಟರ್‌ನಲ್ಲೇ ಕನ್ನಡದ ನಟನಿಗೆ ಮಹಿಳೆಯಿಂದ ಕಪಾಳಮೋಕ್ಷ

ಹೈದರಾಬಾದ್‌ನ ಥಿಯೇಟರ್‌ಗೆ ತೆರಳಿದ ಸಂದರ್ಭದಲ್ಲಿ ‘ಲವ್‌ ರೆಡ್ಡಿ’ (Love Reddy) ಚಿತ್ರತಂಡವು ಕಹಿ ಘಟನೆಯೊಂದನ್ನು ಎದುರಿಸಿದ್ದಾರೆ. ಥಿಯೇಟರ್‌ನಲ್ಲೇ ಕನ್ನಡದ ನಟನಿಗೆ ಮಹಿಳೆಯಿಂದ ಕಪಾಳಮೋಕ್ಷ ಆಗಿರುವ ಘಟನೆಯೊಂದು ನಡೆದಿದೆ. ಇದನ್ನೂ ಓದಿ:ಚಿತ್ರಮಂದಿರದಲ್ಲಿ ಹಾಲಿವುಡ್‌ನ ‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ ಚಿತ್ರದ ಅಬ್ಬರ- ಪ್ರೇಕ್ಷಕರ ಮೆಚ್ಚುಗೆ

ತೆಲುಗಿನ ‘ಲವ್ ರೆಡ್ಡಿ’ (Love Reddy) ಎಂಬ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ನಟ ಎನ್‌ಟಿ ರಾಮಸ್ವಾಮಿ (NT Ramaswamy) ಹಲ್ಲೆ ನಡೆಸಿದ ಘಟನೆ ಹೈದರಾಬಾದ್‌ನ ನಿಜಾಂಪೇಟ್‌ನಲ್ಲಿರುವ ಜಿಪಿಆರ್ ಮಾಲ್‌ನಲ್ಲಿ ನಡೆದಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್ ಸೀನ್ ನೋಡಿ ನಂತರ ಮಹಿಳೆ ಭಾವುಕರಾಗಿದ್ದರು. ಇದೇ ವೇಳೆ, ಚಿತ್ರತಂಡ ವೇದಿಕೆ ಹತ್ತಿದೆ. ಮಹಿಳೆಯೊಬ್ಬರು ಕೋಪದಿಂದ ಅಲ್ಲಿಗೆ ಹೋಗಿ ನಾಯಕಿಯ ತಂದೆ ಪಾತ್ರಧಾರಿ ರಾಮಸ್ವಾಮಿ ಕೆನ್ನೆಗೆ ಬಾರಿಸಿದ್ದಾರೆ. ಚಿತ್ರದಲ್ಲಿ ನಾಯಕ-ನಾಯಕಿಯನ್ನು ರಾಮಸ್ವಾಮಿ ದೂರ ಮಾಡಿದ್ದಕ್ಕೆ ಮಹಿಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ತಕ್ಷಣ ಅಲ್ಲಿದ್ದ ಸಹ ಕಲಾವಿದರು ಮಹಿಳೆಯಿಂದ ರಾಮಿಸ್ವಾಮಿ ಅವರನ್ನು ರಕ್ಷಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ, ‘ಲವ್ ರೆಡ್ಡಿ’ ಸಿನಿಮಾ ಅಕ್ಟೋಬರ್ 18ರಂದು ರಿಲೀಸ್ ಆಗಿತ್ತು. ಅಂಜನ್ ರಾಮಚಂದ್ರ, ಶ್ರಾವಣಿ ಜೋಡಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಸ್ಮರಣ ರೆಡ್ಡಿ ನಿರ್ದೇಶನ ಮಾಡಿದರು.