ರಕ್ಷಣೆಗೆಂದು ಪೊಲೀಸ್ ಠಾಣೆಯೊಳಗೆ ಓಡಿದ ಮಹಿಳೆಯನ್ನ ಗುಂಡಿಟ್ಟು ಕೊಂದ

ಲಕ್ನೋ: ಮಹಿಳೆಯೊಬ್ಬರನ್ನ ಅಟ್ಟಾಡಿಸಿಕೊಂಡು ಹೋಗಿ ಪೊಲೀಸ್ ಠಾಣೆಯೊಳಗೆ ಗುಂಡಿಟ್ಟು ಕೊಲೆಗೈದಿರುವ ಘಟನೆ ಸೋಮವಾರ ರಾತ್ರಿ ಉತ್ತರಪ್ರದೇಶದ ಮೈನ್‍ಪುರಿಯಲ್ಲಿ ನಡೆದಿದೆ.

ಭೂ ವಿವಾದಕ್ಕೆ ಸಂಭಂದಿಸಿದಂತೆ ಈ ಹತ್ಯೆ ನಡೆದಿದೆ ಎಂದು ವರದಿಯಾಗಿದೆ. ಮಹಿಳೆಯನ್ನ ಗುಂಡಿಟ್ಟು ಕೊಂದ ವ್ಯಕ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಪೊಲೀಸ್ ಠಾಣೆ ಬಳಿ ನೆರೆದಿದ್ದ ಜನ ಆತನನ್ನು ಹಿಡಿದು ಥಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ, ಪೊಲೀಸ್ ಠಾಣೆಯ ಹತ್ತಿರವೇ ಈ ವಿವಾದಿತ ಜಮೀನು ಇದೆ. ಸೋಮವಾರ ರಾತ್ರಿ ವಿವಾದಕ್ಕೆ ಸಂಬಂಧಿಸಿದಂತೆಯೇ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ವಿರೋಧಿ ಕುಟುಂಬದ ಸದಸ್ಯನೊಬ್ಬ ಗನ್ ಹಿಡಿದು ಮಹಿಳೆಯ ಬಳಿ ಬಂದಿದ್ದು, ಆಕೆ ರಕ್ಷಣೆಗಾಗಿ ಪೊಲೀಸ್ ಠಾಣೆಯೊಳಗೆ ಓಡಿದ್ದಾರೆ. ಪೊಲೀಸ್ ಠಾಣೆಯೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ರು ಎಂದು ವರದಿಯಾಗಿದೆ.

https://www.youtube.com/watch?v=qC4AYX0KSK0

Comments

Leave a Reply

Your email address will not be published. Required fields are marked *