6 ತಿಂಗಳ ಮಗುವನ್ನು 60 ಸಾವಿರಕ್ಕೆ ಮಾರಿದ ತಾಯಿ- ದುಃಖದಿಂದ ಸಾವನ್ನಪ್ಪಿದ್ದ 5 ವರ್ಷದ ಸಹೋದರಿ

ಲಕ್ನೋ: ಹಣಕ್ಕಾಗಿ ಹೆತ್ತ ತಾಯಿಯೊಬ್ಬಳು ತನ್ನ 6 ತಿಂಗಳ ಮಗುವನ್ನು ಮಾರಿದ ವಿಚಾರವನ್ನು ತಿಳಿದು ಮಗುವಿನ ಸಹೋದರಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.

ಪಾಯಲ್ ಮಗುವನ್ನು ಮಾರಿದ ತಾಯಿ. ಬಾಜಾರ್‍ಕಾಲಾ ಇಲಾಖೆಯಲ್ಲಿರುವ ಪಾಯಲ್‍ನ ಪತಿ ಅನಿಲ್ ಅನಾರೋಗ್ಯದಿಂದ ಬಳಲುತ್ತಿದ್ದು, ಪಾಯಲ್ ಬೇರೆಯವರ ಮನೆಗೆಲಸಕ್ಕೆ ಮಾಡಿಕೊಂಡಿದ್ದಳು. ಮನೆಗೆಲಸಕ್ಕೆ ಹೋಗುವಾಗ ಪಾಯಲ್ ತನ್ನ 6 ತಿಂಗಳ ಮಗು ಓಂನನ್ನು ಹತ್ತಿರದಲ್ಲಿರುವ ತನ್ನ ತವರು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದಳು.

ಕಳೆದ ಬುಧವಾರ ಪಾಯಲ್ ಮನೆಗೆಲಸ ಮುಗಿಸಿ ಹಿಂತಿರುಗುವಾಗ ಆಕೆಯ ಮಗು ಓಂ ಜೊತೆಯಲ್ಲಿ ಇರಲಿಲ್ಲ. ಇದನ್ನು ಗಮನಿಸಿದ ಪತಿ ಅನಿಲ್ ಹಾಗೂ ಮಗಳು ಮೇಘಾ ಪಾಯಲ್‍ನನ್ನು ಪ್ರಶ್ನಿಸಿದ್ದರು. ಆದರೆ ಪಾಯಲ್ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಳು. ನಂತರ ಮರುದಿನವೂ ಕೂಡ ಪಾಯಲ್ ತನ್ನ ಮಗುವನ್ನು ಜೊತೆಗೆ ಕರೆದುಕೊಂಡು ಬರಲಿಲ್ಲ ಎಂದು ವರದಿಯಾಗಿದೆ.

ತನ್ನ ತಮ್ಮ ಓಂ ತಾಯಿ ಜೊತೆ ಬರಲಿಲ್ಲ ಎಂದು ತಿಳಿದ ಆತನ ಸಹೋದರಿ ಮೇಘಾ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಮೇಘಾ ತನ್ನ ತಮ್ಮನ ಜೊತೆ ಹೆಚ್ಚಿನ ಕಾಲ ಕಳೆಯುತ್ತಿದ್ದು, ಆತ ಹಿಂತಿರುಗದ ಕಾರಣ ಮೇಘಾಳ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದಳು. ಮೇಘಾ ಆರೋಗ್ಯದ ಸ್ಥಿತಿ ತುಂಬ ಹದ್ದಗೆಟ್ಟಿದ್ದರೂ ಪಾಯಲ್ ಮಗನನ್ನು ಮನೆಗೆ ಕರೆದುಕೊಂಡು ಬಾರದನ್ನು ನೋಡಿ ಪತಿ ಅನಿಲ್‍ಗೆ ಅನುಮಾನ ಮೂಡಿದೆ. ಆದರೆ ಮಗಳ ಆರೋಗ್ಯದ ಕಡೆ ಹೆಚ್ಚು ಗಮನ ಇದಿದ್ದರಿಂದ ಅನಿಲ್ ತನ್ನ ಪತ್ನಿ ಪಾಯಲ್‍ಗೆ ಹೆಚ್ಚು ಪ್ರಶ್ನಿಸಲಿಲ್ಲ ಎಂದು ಹೇಳಲಾಗಿದೆ.

ಮೇಘಾ ಆರೋಗ್ಯದ ಸ್ಥಿತಿ ತುಂಬ ಹದಗೆಟ್ಟು ಶುಕ್ರವಾರ ಸಾವನ್ನಪ್ಪಿದ್ದಳು. ನಂತರ ಅನಿಲ್ ತನ್ನ ಪತ್ನಿ ವಿರುದ್ಧ ಮಗ ಕಾಣೆಯಾಗಿರುವುದರ ಬಗ್ಗೆ ಕೇಸ್ ದಾಖಲಿಸಿದ್ದರು. ಬಳಿಕ ಪೊಲೀಸರು ಪಾಯಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗನನ್ನು 60 ಸಾವಿರ ರೂ. ಗೆ ಅಶು ಎಂಬಾತನಿಗೆ ಮಾರಾಟ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾಳೆ. ಮಗುವಿನ ದೇಹಕ್ಕೆ ಹಚ್ಚೆ ಹಾಕಿ ಮಾರಾಟ ಮಾಡಿದ್ದು, ಈಗ ಇಬ್ಬರನ್ನು ಪೊಲೀಸರು ಬಂಧಿಸಿ ಮಗುವನ್ನು ಅನಿಲ್ ವಶಕ್ಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *