ಋತುಸ್ರಾವದ ರಕ್ತ ಸೇವಿಸುತ್ತೇನೆ, ಫೇಸ್ ಮಾಸ್ಕ್‌ ಆಗಿ ಬಳಸುತ್ತೇನೆ

ಮ್ಯಾಡ್ರಿಡ್: ಮಾಸಿಕ ದಿನಗಳ ಬಗ್ಗೆ ಮಹಿಳೆಯರು ಹೆಚ್ಚಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಈ ವಿಚಾರವಾಗಿ ಮುಜುಗರ ಪಡುವವರೆ ಹೆಚ್ಚು. ಆದರೆ ಇಲ್ಲೊಬ್ಬ ಯುವತಿ ನೀಡಿರುವ ಹೇಳಿಕೆ ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

30 ವರ್ಷದ ಯುವತಿ ಜಾಸ್ಮಿನಾ ಎಲಿಸಾ ಕಾರ್ಟರ್ ಮಾಸಿಕ ದಿನಗಳಲ್ಲಿ ಬರುವ ರಕ್ತವನ್ನು ದೇಹದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸಿಕೊಳ್ಳುಲು ಕುಡಿಯುತ್ತಾಳಂತೆ. ಮುಖದ ಸೌಂದರ್ಯವರ್ಧನೆಗೆ ಫೇಸ್ ಮಾಸ್ಕ್ ರೀತಿ ಬಳಸುತ್ತಾಳಂತೆ. ಅಷ್ಟೇ ಅಲ್ಲದೆ ಮಾಸಿಕ ದಿನಗಳ ರಕ್ತವನ್ನು ಬಳಸಿ ಪೀರಿಯಡ್ ಪೇಂಟಿಂಗ್ಸ್ ಎಂದು ಅದೇ ರಕ್ತದಲ್ಲಿ ಚಿತ್ರವನ್ನೂ ಬಿಡಿಸಿದ್ದಾಳೆ. ಈಕೆಯ ಈ ಸುದ್ದಿ ಇದೀಗ ಸೋಶಿಯಲ್ ವೈರಲ್ ಆಗುತ್ತಿದೆ.

 

ಜಾಸ್ಮಿನ್ ಎಲಿಸಾ ಕಾರ್ಟರ್ ಹೇಳಿಕೆಯ ಬಗ್ಗೆ ಚರ್ಮಶಾಸ್ತ್ರಜ್ಞರೊಬ್ಬರು ಪೀರಿಯಡ್ ಬ್ಲಡ್ ಫೇಸ್ ಮಾಸ್ಕ್ ರೀತಿ ಬಳಸುವುದಕ್ಕೆ ಅಥವಾ ಸೇವಿಸಿದರೆ ಪೋಷಕಾಂಶಗಳು ದೊರೆಯುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಹಲವು ಸಿದ್ಧಾಂತದ ಪ್ರಕಾರ ಮಾಸಿಕ ದಿನಗಳ ರಕ್ತವು ಉರಿಯೂತದ ಲಕ್ಷಣಗಳನ್ನು ಹೊಂದಿದೆ ಎನ್ನಲಾಗುತ್ತದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *