ಯುವತಿ ಮೇಲೆ ಅತ್ಯಾಚಾರವೆಸಗಿ ಚಿನ್ನಾಭರಣ ಕದ್ದು ಪರಾರಿ – ಮಹಿಳೆ ಸೇರಿ ಐವರ ವಿರುದ್ಧ ಕೇಸ್

ಭೋಪಾಲ್: ಯುವತಿಯೊಬ್ಬಳ (Woman) ಮೇಲೆ ಅತ್ಯಾಚಾರವೆಸಗಿ (Rape) ಆಕೆಯ ಬಳಿಯಿದ್ದ ಚಿನ್ನಾಭರಣ (Jewellery) ಹಾಗೂ ನಗದುಗಳನ್ನು ಐದು ಜನರ ಗುಂಪೊಂದು ದೋಚಿರುವ ಘಟನೆ ಮಧ್ಯಪ್ರದೇಶದ (Madhya Pradesh) ದಾಮೋಹ್‍ನಲ್ಲಿ ನಡೆದಿದೆ.

32 ವರ್ಷದ ಯುವತಿಯೊಬ್ಬಳು ತನ್ನ ಸಹೋದರನೊಂದಿಗೆ ಗ್ರಾಮಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದಳು. ಈ ವೇಳೆ ಐವರ ಗುಂಪೊಂದು ತಡೆದಿದ್ದಾರೆ. ನಂತರ ಯುವತಿ ಬಳಿಯಿದ್ದ ಚಿನ್ನಾಭರಣ, ಮೊಬೈಲ್ ಹಾಗೂ ನಗದುಗಳನ್ನು ದೋಚಿದ್ದಾರೆ.

ಅಷ್ಟೇ ಅಲ್ಲದೇ ಆರೋಪಿಗಳು ಸಂತ್ರಸ್ತೆಯ ಸಹೋದರನಿಗೆ ತೀವ್ರವಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಪ್ರಜ್ಞೆ ತಪ್ಪಿದ್ದಾನೆ. ಅದಾದ ಬಳಿಕ ಆ ಗುಂಪು ಯುವತಿಯನ್ನು ಪಕ್ಕದಲ್ಲಿದ್ದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಮೇಲೆ ಓರ್ವ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ. ಇದನ್ನೂ ಓದಿ: ಕಚ್ಚಾ ತೈಲದ ವಿಂಡ್‌ಫಾಲ್‌ ತೆರಿಗೆ ಕಡಿತಗೊಳಿಸಿದ ಭಾರತ

ಘಟನೆಗೆ ಸಂಬಂಧಿಸಿದಂತೆ ರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳಲ್ಲಿ ಓರ್ವ ಮಹಿಳೆಯೂ ಭಾಗಿಯಾಗಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಹಾಗೂ ಆಕೆಯ ಸಹೋದರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಕ್ಕಿಂನಲ್ಲಿ ಭಾರೀ ಹಿಮಪಾತ – 6 ಸಾವು, ಹಲವರು ನಾಪತ್ತೆ