ಉಜ್ಜಯಿನಿಯ ರಸ್ತೆ ಬದಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ – ವೀಡಿಯೋ ವೈರಲ್

– ಆರೋಪಿಯೊಬ್ಬನನ್ನು ಬಂಧಿಸಿದ ಪೊಲೀಸರು

ಭೋಪಾಲ್: ಮಧ್ಯಪ್ರದೇಶದ (Madhya Pradesh) ಉಜ್ಜಯಿನಿ (Ujjain) ನಗರದಲ್ಲಿ ಮಹಿಳೆ ಮೇಲೆ ಅತ್ಯಾಚಾರವಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದಾ ಜನ ಜಂಗುಳಿಯಿಂದ ಕೂಡಿರುವ ಉಜ್ಜಯಿನಿಯ ರಸ್ತೆಯ ಪಕ್ಕದಲ್ಲಿಯೇ ಮಹಿಳೆಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ದಾರಿಹೋಕರು ತಮ್ಮ ಮೊಬೈಲ್‌ನಲ್ಲಿ ಇದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ತಿಂಗಳಿಗೆ 10 ಸಾವಿರ ಕೊಡ್ತೀನಿ, ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇರ್ತೀಯಾ ಅಂತ ಕೇಳಿದ್ದ ರೇಣುಕಾ – ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ಈ ಘಟನೆಯೂ ಬುಧವಾರ (ಸೆ.4) ಮಧ್ಯಾಹ್ನ ಕೊಯ್ಲಾ ಪಾಠಕ್ ಎನ್ನುವ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಲೋಕೇಶ್ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.

ಲೋಕೇಶ್ ಆ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಮಹಿಳೆಯು ಮದ್ಯ ಸೇವನೆ ಮಾಡಿ ಅಮಲಿನಲ್ಲಿರುವುದನ್ನು ಕಂಡ ಆತ ಆಕೆಯನ್ನು ರಸ್ತೆ ಪಕ್ಕಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಬೆದರಿಸಿದ್ದಾನೆ. ಇದನ್ನು ದಾರಿಹೋಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಪ್ಲಾಸ್ಟಿಕ್ ಆಯುವವರು ಅವತ್ತಿನ ದಿವಸ ಲೋಕೇಶ್‌ನನ್ನು ಆ ಪ್ರದೇಶದಲ್ಲಿ ನೋಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು, ವೀಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಲೋಕೇಶ್‌ನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಘಟನೆಯನ್ನು ವಿರೋಧಿಸಿದ ಕಾಂಗ್ರೆಸ್ ಪಕ್ಷ ಬಿಜೆಪಿಯ ಆಡಳಿತದಲ್ಲಿ ಸಂಪೂರ್ಣವಾಗಿ ಕಾನೂನು ಹದಗೆಟ್ಟಿದೆ ಎಂದು ದೂರಿದೆ. ಉಜ್ಜಯಿನಿ ನಗರ ಒಂದು ಪವಿತ್ರ ಸ್ಥಳ. ಇಂತಹ ಘಟನೆಯಿಂದಾಗಿ ನಾಚಿಕೆಯಾಗಬೇಕು. ಇಂತಹ ಹೀನ ಘಟನೆಯಿಂದ ನಾಚಿಕೆಯಾಗಿ ಅಧಿಕಾರದಲ್ಲಿರುವವರು ರಾಜೀನಾಮೆ ನೀಡಬೇಕು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಉಜ್ಜಯಿನಿಯಂತಹ ಪವಿತ್ರ ಸ್ಥಳದಲ್ಲಿ, ಜನನಿಬಿಡ ಪ್ರದೇಶದಲ್ಲಿ ಅತ್ಯಾಚಾರ ನಡೆಯುತ್ತಿದೆ. ಇದರಿಂದ ತಿಳಿಯುವುದೆನೆಂದರೆ ಈ ಸರ್ಕಾರದಲ್ಲಿ ಕಾನೂನು ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಗೊತ್ತಾಗುತ್ತದೆ. ಮುಖ್ಯಮಂತ್ರಿಗಳ ತವರಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಗರ್ಲ್‍ಫ್ರೆಂಡ್ ಭೇಟಿಗೆ ಬಂದು ಪೊಲೀಸರ ಬಲೆಗೆ ಬಿದ್ದ ನಕ್ಸಲ