ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದಕ್ಕೆ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಕಾರ್ಯದರ್ಶಿ ಕವನಗೆ ವ್ಯಕ್ತಿಯೊಬ್ಬ ಅಶ್ಲಿಲವಾಗಿ ಕಾಮೆಂಟ್ ಮಾಡಿದ್ದಾನೆ.
ಮಹಿಳೆ ಅಂತಾನೂ ನೋಡದೇ ನಿನ್ನನ್ನು ನಗ್ನ ಮಾಡುತ್ತೇನೆಂದು ಫೇಸ್‍ಬುಕ್‍ನಲ್ಲಿ ರಾಜೇಶ್ ಎಂಬ ವ್ಯಕ್ತಿ ಕಮೆಂಟ್ ಮಾಡಿದ್ದಾನೆ. ರಾಜೇಶ್ ಕಾಮೆಂಟ್‍ಗೆ ಸಿಡಿದೆದ್ದ ಕವನ, ನನ್ನ ಸ್ಟೆಟ್ಮೆಂಟ್‍ಗೆ ತುಂಬಾ ವಿರೋಧಿ ಕರೆಗಳು ಬರ್ತಿದೆ. ಅದರಲ್ಲಿ ಸೊಂಟದ ಕೆಳಗೆ ಮಾತನಾಡುತ್ತಿರುವವರ ಸಂಖ್ಯೆಯಲ್ಲಿ ಅಗ್ರಗಣ್ಯ ಸ್ಥಾನ ರಾಜೇಶನದ್ದು. ನನ್ನನ್ನು ನಗ್ನ ಮಾಡಲು ಹತ್ತು ಜನ್ಮ ಅವತರಿಸಿ ಬಂದರೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಓಪನ್ ಸ್ಟೆಟ್ಮೆಂಟ್ ಕೊಡ್ತಿದ್ದೀನಿ. ಏನ್ ಮಾಡ್ತಿಯೋ ಮಾಡಪ್ಪ. ನಾನಾ ಅಥವಾ ಪಂಚಾಚಾರ್ಯ ಎಂದು ಜೀವ ಬೆದರಿಕೆ ಹಾಕಿರುವ ಇವನಾ ನೋಡಿಯೇ ಬಿಡ್ತೇನೆ ಎಂದು ಫೇಸ್ಬುಕ್‍ನಲ್ಲಿ ಕವನಾ ಸವಾಲು ಹಾಕಿದ್ದಾರೆ.

https://www.facebook.com/kavanabasavakumar9/posts/1498533070202199





Leave a Reply