ಪಾಟ್ನಾ: ಬಿಹಾರದ ಹಾಜಿಪುರದಲ್ಲಿ ವ್ಯಕ್ತಿಯೋರ್ವ ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಎಫ್ಐಆರ್ ದಾಖಲಿಸಿದ್ದರೆ, ಮಗಳು ತಾನು ಮದುವೆಯಾಗಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ.
ವ್ಯಕ್ತಿಯೋರ್ವ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಗೋರೌಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆದರೆ ಮಗಳು ತನ್ನ ಫೇಸ್ ಬುಕ್ ಪೇಜ್ನಲ್ಲಿ ತಾನು ಮದುವೆಯಾಗಿರುವುದಾಗಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾಳೆ. ಅಲ್ಲದೇ ಅಪ್ಪಾ ನಮಗೆ ತೊಂದರೆ ಕೊಡಬೇಡಿ ಎಂದು ವೀಡಿಯೋದಲ್ಲಿ ಕೇಳಿಕೊಂಡಿದ್ದಾಳೆ. ಜೊತೆಗೆ ಪೊಲೀಸರ ನೆರವಿಗಾಗಿ ಮನವಿ ಮಾಡಿದ್ದಾಳೆ. ಇದನ್ನೂ ಓದಿ: ತಾಯಿಗೆ ಇಟ್ಟಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ

ವೀಡಿಯೋದಲ್ಲಿ ಹುಡುಗಿ ಒಬ್ಬ ಹುಡುಗನೊಂದಿಗೆ ಕಾಣಿಸಿಕೊಂಡಿದ್ದು, ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದೇನೆ ಮತ್ತು ತಾನು ಸಂತೋಷವಾಗಿದ್ದೇನೆ. ದಯವಿಟ್ಟು ಕುಟುಂಬದವರು ತೊಂದರೆ ನೀಡಬೇಡಿ ಎಂದಿದ್ದಾಳೆ. ಈ ವೀಡಿಯೋ ವೈರಲ್ ಆದ ಬಳಿಕ ಹುಡುಗಿ ಮಲಿಕ್ಪುರದವಳು ಎಂದು ತಿಳಿದುಬಂದಿದೆ.
ಇದೀಗ ಪೊಲೀಸರ ಕೈನಲ್ಲಿ ಎಫ್ಐಆರ್ ಕಾಪಿ ಹಾಗೂ ಹುಡುಗಿಯ ಈ ವೀಡಿಯೋ ಎರಡು ಇದೆ. ಸದ್ಯ ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್ ಲಸಿಕೆ – ಪ್ರಧಾನಿ ಅಭಿನಂದನೆ

Leave a Reply