ಪಿಜ್ಜಾ ಆರ್ಡರ್‌ ಮಾಡುವಾಗ 9,000 ಹೋಯ್ತು – ವಾಪಸ್‌ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ

ಮುಂಬೈ: ಆನ್‍ಲೈನ್‍ನಲ್ಲಿ ಪಿಜ್ಜಾ, ಡ್ರೈ ಫ್ರೂಟ್ಸ್ ಆರ್ಡರ್ ಮಾಡುವಾಗ ಕಳೆದುಕೊಂಡ ಹಣವನ್ನು ವಾಪಾಸ್ ಪಡೆಯಲು ಪ್ರಯತ್ನಿಸಿದಾಗ ಸೈಬರ್ ವಂಚಕರು ವೃದ್ಧ ಮಹಿಳೆಗೆ 11 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

BRIBE

ನಡೆದಿದ್ದೇನು?: ಅಂಧೇರಿಯ ಉಪನಗರ ನಿವಾಸಿಯಾಗಿರುವ ಮಹಿಳೆ ಆನ್‍ಲೈನ್‍ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಹಣವನ್ನು ತನ್ನ  ಫೋನ್‍ನಲ್ಲಿ ಪಾವತಿಸುವಾಗ 9,999 ಕಳೆದುಕೊಂಡಿದ್ದಾರೆ. ಇದನ್ನೂ ಓದಿ:  ಮೇಕೆದಾಟು ಪಾದಯಾತ್ರೆ ಬಿಸಿ – ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೂ ಕೊರೊನಾ ದೃಢ

MONEY

ತಕ್ಷಣ ಎಚ್ಚೆತ್ತುಕೊಂಡ ವೃದ್ಧೆ ತಾನೂ ಹಣವನ್ನು ಕಳುಹಿಸಿದ ನಂಬರ್‍ಗೆ ಕರೆಮಾಡಿದ್ದಾಳೆ. ಆಗ ವಂಚಕ ಮಹಿಳೆಗೆ ಮೊಬೈಲ್ ಫೋನ್‍ನಲ್ಲೊಂದು ಅಪ್ಲಿಕೇಶನ್ ಡೌನ್‍ಲೋಡ್ ಮಾಡಲು ಹೇಳಿದ್ದಾನೆ. ಆಗ ಮಹಿಳೆಯ ಮೊಬೈಲ್ ಆ್ಯಕ್ಸಸ್ ಅವರಿಗೆ ಸಿಕ್ಕಿದೆ. ಆಗ ಬ್ಯಾಂಕ್ ಖಾತೆ ವಿವರ, ಪಾಸ್‍ವರ್ಡ್ ಕುರಿತಾದ ಎಲ್ಲಾ ಮಾಹಿತಿ ವಂಚಕರಿಸಿಗೆ ಸಿಕ್ಕಿದೆ. ವಂಚಕ 2021ರ ನ.14 ಮತ್ತು ಡಿ.1 ನಡುವೆ ಮಹಿಳೆಯ ಬ್ಯಾಂಕ್ ಖಾತೆಯಿಂದ 11.78 ಲಕ್ಷವನ್ನು ವರ್ಗಾಯಿಸಿಕೊಂಡು ಡ್ರಾ ಮಾಡಿ ವಂಚಿಸಿದ್ದಾನೆ. ಇದನ್ನೂ ಓದಿ:  ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕ್ ಖರ್ಗೆಗೂ ಕೊರೊನಾ ಪಾಸಿಟಿವ್

ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಕುರಿತಾಗಿ ತಿಳಿಯುತ್ತಿದ್ದಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ಬಿಕೆಸಿ ಸೈಬರ್ ಪೊಲೀಸ್ ಠಾಣೆಗೆ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 420 (ವಂಚನೆ) ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *