ವರದಕ್ಷಿಣಿ ಕಿರುಕುಳ ನೀಡಿ ಪತಿಯಿಂದಲೇ ಪತ್ನಿಯ ಹತ್ಯೆ?

ಹಾವೇರಿ: ವರದಕ್ಷಿಣೆ ಕಿರುಕುಳ ನೀಡಿ ಕೊನೆಗೆ ಪತ್ನಿಗೆ ಪತಿ ವಿಷ ನೀಡಿ ಹತ್ಯೆಗೈದ ಆರೋಪವೊಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಾಡಗುಪ್ಪಿ ಗ್ರಾಮದಲ್ಲಿ ಕೇಳಿ ಬಂದಿದೆ.

ಮೃತ ಗೃಹಿಣಿಯನ್ನ ರೇಖಾ ಮುರುಡಣ್ಣನವರ(23) ಎಂದು ಗುರುತಿಸಲಾಗಿದೆ. ಮೃತ ರೇಖಾ, ಹಾನಗಲ್ ತಾಲೂಕಿನ ಹರವಿ ಗ್ರಾಮದ ನಿವಾಸಿ.

ರೇಖಾರಿಗೆ ಶಾಡಗುಪ್ಪಿ ಗ್ರಾಮದ ಶಂಭು ಎಂಬವನ ಜೊತೆ ಮೂರು ವರ್ಷಗಳ ಹಿಂದೆ ಮದುವೆ ಆಗಿತ್ತು. ಮೃತ ರೇಖಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಒಂದು ವರ್ಷದ ಹೆಣ್ಣು ಮಗುವಿದೆ. ಇದೀಗ ಪತಿ ಹಾಗೂ ಆತನ ಸಂಬಂಧಿಕರು ವರದಕ್ಷಿಣೆ ಕಿರುಕುಳ ನೀಡಿ, ವಿಷಕುಡಿಸಿ ಶನಿವಾರ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಅಂತಾ ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ಈ ಕುರಿತಂತೆ ಆಡೂರು ಪೊಲೀಸ್ ಠಾಣೆಯಲ್ಲಿ ರೇಖಾ ಪತಿ ಶಂಭು ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

 

 

 

Comments

Leave a Reply

Your email address will not be published. Required fields are marked *