ಹಣಕ್ಕಾಗಿ ಗೆಳತಿಯನ್ನೇ ಕೊಲೆ ಮಾಡಿದ ಮಹಿಳೆ

crime

ಮುಂಬೈ: ಹಣದ ಆಸೆಗಾಗಿ ಮಹಿಳೆಯೊಬ್ಬರು ಗೆಳತಿಯನ್ನೇ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ವಿಜಯಾ ತಿಲಕ್ ಚೌಕ್‍ನಲ್ಲಿ ನಡೆದಿದೆ.

ಸೀಮಾ ಖೋಪಡೆ (58) ಆರೋಪಿ. ಇವರು ಡೊಂಬಿವಿಲಿ (ಪೂರ್ವ) ಕೊಳಗೇರಿಯ ನಿವಾಸಿ. ವಿಜಯಾ ಬಾವಿಸ್ಕರ್ (58) ಮೃತ ಮಹಿಳೆ. ವಿಜಯ ಹಾಗೂ ಸೀಮಾ ಕಳೆದ 18 ವರ್ಷಗಳಿಂದ ಸ್ನೇಹಿತರಾಗಿದ್ದರು. ವಿಜಯಾ ಪತಿಯಿಂದ ವಿಚ್ಛೇದನ ಪಡೆದಿದ್ದರು. ಇದರಿಂದಾಗಿ ವಿಜಯಾ ತಿಲಕ್ ಚೌಕ್‍ನಲ್ಲಿರುವ ಆನಂದ್ ಶೀಲಾ ಕಟ್ಟಡದಲ್ಲಿರುವ ಫ್ಲಾಟ್‍ನಲ್ಲಿ ವಾಸಿಸುತ್ತಿದ್ದರು.

ವಿಜಯಾ ಅವರ ಕುಟುಂಬಸ್ಥರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅವರೊಬ್ಬರೇ ಇರುವುದನ್ನು ತಿಳಿದು ತಡರಾತ್ರಿ ಸೀಮಾ ಅವರ ಮನೆಗೆ ಹೋಗಿದ್ದಾರೆ. ಅಲ್ಲಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಅವರ ಮನೆಯಲ್ಲಿದ್ದ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

ಪ್ರಕರಣ ಸಂಬಂಧ ಥಾಣೆ ಪೊಲೀಸರು, ಮೃತ ಮಹಿಳೆ ವಿಜಯಾ ಅವರ ಹೆಸರಲ್ಲಿ ಸಾಕಷ್ಟು ಆಸ್ತಿ ಇರುವುದರಿಂದ ಆಸ್ತಿಯ ಆಸೆಗಾಗಿ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕಿಸಿದ್ದರು. ಆದರೆ ವಿಜಯಾ ಅವರ ಕರೆಗಳ ವಿವರ ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ವೀಕ್ಷಿಸಿದ ನಂತರ, ವಿಜಯಾಳನ್ನು ಆರೋಪಿ ಸೀಮಾ ಕೊಲೆ ಮಾಡಿರುವುದಾಗಿ ತಿಳಿದಿದೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕು ಎಂದಿದ್ದ ಕಾಳಿಸ್ವಾಮಿ ಅರೆಸ್ಟ್

ಈ ಸಂಬಂಧ ಪೊಲೀಸ್ ಆರೋಪಿ ಸೀಮಾರನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 14 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಸೀಮಾ, ಆಸ್ತಿ ಆಸೆಗಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ವಿಜಯಾ ಬಳಿಯಿದ್ದ ಕಿವಿಯೋಲೆಗಳು, ಚಿನ್ನದ ಸರ, ಉಂಗುರ, ಸುಮಾರು 10 ತೊಲಗಳ ಎರಡು ಬಳೆಗಳು ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಸಂಬಂಧ ಥಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *