ನಡು ರಸ್ತೆಯಲ್ಲಿ ಮಾವನಿಗೆ ಚಪ್ಪಲಿಯಿಂದ ಹೊಡೆದ ಸೊಸೆ

ಲಕ್ನೋ: ನಡುರಸ್ತೆಯಲ್ಲಿ ಮಹಿಳೆಯೊಬ್ಬಳು ತನ್ನ ಮಾವನಿಗೆ ನಿಷ್ಕರುಣೆಯಿಂದ ಚಪ್ಪಲಿಯಿಂದ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಹಿಳೆ ತನ್ನ ತಂದೆ ಹಾಗೂ ಸಹೋದರನೊಂದಿಗೆ ಮಾವನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಚಪ್ಪಲಿಯಲ್ಲಿ ಥಳಿಸಿದ್ದಲ್ಲದೇ ಕಿಂಚಿತ್ತು ಕರುಣೆ ತೋರದೇ ಮೂವರು ಸೇರಿಕೊಂಡು ವೃದ್ಧನನ್ನು ರಸ್ತೆಯಲ್ಲಿ ಧರಧರನೇ ಎಳೆದೊಯ್ದಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಈಶ್ವರ ಖಂಡ್ರೆ ವಾಗ್ದಾಳಿ

ಈ ಸಂಪೂರ್ಣ ಘಟನೆಯು ಹೆದ್ದಾರಿಯ ನಡುವಿನ ಛೇದಕದಲ್ಲಿ ಪೊಲೀಸ್ ಚೌಕಿಯ ಸಮೀಪ ಸಂಭವಿಸಿದೆ. ವೀಡಿಯೋದಲ್ಲಿ ಸಹೋದರ ನನ್ನ ಸಹೋದರಿಯ ತಪ್ಪು ಏನಿದೆ. ಅವಳನ್ನೆ ಏಕೆ ಹೊಡೆದೆ ಎಂದು ಪದೇ, ಪದೇ ಕೇಳುತ್ತಾ ಹೊಡೆದಿದ್ದಾನೆ. ಈ ವೇಳೆ ಅಸಹಾಯಕನಾದ ವೃದ್ಧ, ತನಗೆ ಬಿಡುವಂತೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದರು. ಮೂವರು ಸೇರಿಕೊಂಡು ವೃದ್ಧನಿಗೆ ಹೊಡೆದು ಮತ್ತು ಕಾಲಿನಿಂದ ಒದ್ದಿದ್ದಾರೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ತಂದೆಯನ್ನು ವಶಕ್ಕೆ ಪಡೆದಿದ್ದು, ತಲೆ ಮರೆಸಿಕೊಂಡಿರುವ ಆಕೆಯ ಸಹೋದರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಗಾಯಗೊಂಡಿರುವ ವೃದ್ಧನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮೈಸೂರು ಉದ್ಯಮಿಯ ಕೊಲೆಗೆ ಕೇಸ್‍ಗೆ ಟ್ವಿಸ್ಟ್ – ತಂದೆಯನ್ನೇ ಬರ್ಬರ ಹತೈಗೈದ 16ರ ಮಗ!

ಘಟನೆ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಗಾಯಾಳು ಸುಖದೇವ್ ಸಿಂಗ್ ಯಾದವ್ ಅವರ ಪುತ್ರ ಬಬ್ಲು ಯಾದವ್ ಅವರು, ತಮ್ಮ ಕಿರಿಯ ಸಹೋದರ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದು, ಅವರ ಪತ್ನಿ ಪುಷ್ಪಾ, ಸಹೋದರ ಕಮಲೇಶ್ ಮತ್ತು ಅವರ ತಂದೆ ರಾಮ್ ವಿಲಾಸ್ ನಮ್ಮ ತಂದೆಗೆ ಸಂಪೂರ್ಣ ಆಸ್ತಿಯನ್ನು ಪುಷ್ಪಾ ಅವರ ಹೆಸರಿಗೆ ಮಾಡುವಂತೆ ಒತ್ತಾಯಿಸಿದ್ದರು. ನಂತರ ಆಸ್ತಿಯನ್ನು ಹಂಚುವಂತೆ ಒತ್ತಡ ಹೇರಿದ್ದಕ್ಕೆ ನಾನು ಆಸ್ತಿಯನ್ನು ಹಂಚಲು ಸಿದ್ಧನಿಲ್ಲ ಎಂದು ತಿಳಿಸಿದ್ದರು. ಅಲ್ಲದೇ ಆಕೆಗೆ ಇರಲು ಒಂದು ಕೋಣೆಯನ್ನು ಸಹ ನೀಡಲಾಗಿತ್ತು. ಆದರೆ ಅಷ್ಟಕ್ಕೆ ತೃಪ್ತಿ ಕಾಣದೇ, ಮಹಿಳೆ ತನ್ನ ತಂದೆ ಮತ್ತು ಕುಟುಂಬಸ್ಥರನ್ನು ಕರೆಸಿ ನಮ್ಮ ತಂದೆಗೆ ಹೊಡೆಸಿದ್ದಾಳೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *