ಮೂರು ಮದ್ವೆಯಾದ್ಮೇಲೂ ಬೇರೆ ಯುವಕರ ಜೊತೆ ಚಾಟಿಂಗ್, ಮೀಟಿಂಗ್!

ಮೈಸೂರು: ಒಂದಲ್ಲ, ಎರಡಲ್ಲ, ಮೂರು ಮದುವೆಯಾಗಿ ಇತರೆ ಯುವಕರೊಂದಿಗೆ ಚಾಟಿಂಗ್ ಮಾಡುತ್ತಿದ್ದ ಮಹಿಳೆಯನ್ನು ಅವಳ ಮೂರನೇ ಪತಿ ಪ್ರಶ್ನಿಸಿದ್ದಕ್ಕೆ, ಆತನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಮೈಸೂರಲ್ಲಿ ನಡೆದಿದೆ.

ಮೈಸೂರಿನ ಉದಯ ಗಿರಿಯ ನಿಧಾ ಖಾನ್ ಮೂರು ಮದುವೆಯಾದ ಮಹಿಳೆ. ಇವಳು ಎರಡು ಮದುವೆಯಾದ ಮೇಲೆ ಟಿಂಡರ್ ಆ್ಯಪ್ ಮೂಲಕ ರಾಜೀವ್ ನಗರದ ಅಜಾಮ್ ಖಾನ್‍ನನ್ನು ಪರಿಚಯ ಮಾಡಿಕೊಂಡಳು. ನಂತರ ತಾನು ಅವಿವಾಹಿತೆ ಎಂದು ಸುಳ್ಳು ಹೇಳಿ 2020ರಲ್ಲಿ ಮೂರನೇ ಮದುವೆಯಾಗಿದ್ದಾಳೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅಜಾಮ್ ಪತ್ನಿ ನಿಧಾ ಖಾನ್‍ನ ವರ್ತನೆಯಿಂದ ಅನುಮಾನಗೊಂಡಿದ್ದಾನೆ. ಇದರಿಂದಾಗಿ ನಿಧಾ ಖಾನ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾನೆ. ಆಗ ಆಕೆ ಹಿಂದೆ ಎರಡು ಮದುವೆ ಆಗಿರುವ ವಿಷಯ ಗೊತ್ತಾಗಿದೆ. ಅಲ್ಲದೆ ಮೂರು ಮದುವೆಯಾರೂ ಬೇರೆ ಯುವಕರ ಜೊತೆ ಚಾಟಿಂಗ್, ಮೀಟಿಂಗ್ ಕೂಡ ಮಾಡಿರುವ ವಿಷಯ ಕೇಳಿ ಶಾಕ್ ಆಗಿದ್ದಾನೆ. ಇದನ್ನೂ ಓದಿ: ಸಾಲ ತಿರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ದಂಪತಿ

ಕೊನೆಗೆ ಬೇರೆ ಯುವಕರೊಂದಿಗೆ ಚಾಟಿಂಗ್ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಅಜಾಮ್‍ಗೆ ಸಿಕ್ಕಿಬಿದ್ದಿದ್ದಾಳೆ. ಪತ್ನಿ ರಂಗಿನಾಟ ಕಣ್ಣಾರೆ ಕಂಡ ಪತಿ ಅಜಾಮ್ ಪತ್ನಿ ಹಾಗೂ ಆಕೆಯ ಹೊಸ ಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಇದನ್ನೂ ಓದಿ: ನಾನು ಗಾಂಧಿ, ನೆಹರೂ ಕುಟುಂಬದ ಗುಲಾಮ: ಕಾಂಗ್ರೆಸ್ ಶಾಸಕ

Comments

Leave a Reply

Your email address will not be published. Required fields are marked *