ಹಸು ಜೊತೆಗೆ ವಿವಾಹವಾದ ಮಹಿಳೆ

ಕಾಂಬೋಡಿಯಾ: ವೃದ್ಧೆಯೊಬ್ಬಳು ತನ್ನ ತೀರಿ ಹೋದ ಪತಿಯ ಎಲ್ಲಾ ಗುಣ ಲಕ್ಷಣಗಳು ಈ ಹಸುವಿನಲ್ಲಿ ಇದೆ ಎಂದು  ಅದರ ಜೊತೆಗೆ ವಿವಾಹವಾಗಿರುವುದು  ಸುದ್ದಿಯಾಗಿದೆ.

ಕಾಂಬೋಡಿಯಾದ ಕ್ರಾತಿ ಪ್ರಾಂತ್ಯದಲ್ಲಿ ವಾಸಿಸುವ 74 ವರ್ಷದ ಖಿಮ್ ಹ್ಯಾಂಗ್ ಹೆಸರಿನ ವೃದ್ಧೆ ತೀರಿ ಹೋದ ತನ್ನ  ಪತಿಯ ಎಲ್ಲಾ ಗುಣಲಕ್ಷಣಗಳನ್ನು ಒಂದು ಹಸುವಿನಲ್ಲಿ ಕಂಡಿದ್ದಾಳೆ. ಆ ಹಸುವನ್ನು ಮದುವೆಯಾಗಿದ್ದಾಳೆ. ಈಕೆ ವಯೋವೃದ್ಧೆಯಾಗಿದ್ದು, ಮದುವೆಯಾಗಿರುವುದಕ್ಕೆ ಯಾವುದೇ ವೀಡಿಯೋ ಸಾಕ್ಷಿಗಳಿಲ್ಲ. ಆದರೆ ಗ್ರಾಮದ ಅನೇಕ ಜನರು ಮದುವೆಯನ್ನು ನೋಡಿದ್ದೇವೆ, ಮದುವೆಯಲ್ಲಿ ಭಾಗವಹಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಶಿಶುವಿನ ತಲೆ ಕಂಡು ಭಯಭೀತರಾದ ಜನ

ಮರುಜನ್ಮ ಪಡೆದು ತನ್ನ ಪತಿ ಹಸುವಿನ ರೂಪದಲ್ಲಿ ಮರಳಿದ್ದಾನೆ ಎಂದು ಮಹಿಳೆಗೆ ಹೇಗೆ ಅನಿಸಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ? ಇದಕ್ಕೆ ಉತ್ತರವನ್ನು ನೋಡೋದಾದರೆ ಹಸು ಜನಿಸಿದಾಗ, ಮಹಿಳೆ ಅದರೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದಳು. ಆಗ ಹಸು ಆಕೆಯ ಕೈ ಮತ್ತು ಮುಖವನ್ನು ನೆಕ್ಕುತ್ತಿತ್ತು ಮತ್ತು ಅನೇಕ ಬಾರಿ ಮುಖಕ್ಕೆ ಮುತ್ತು ನೀಡುತ್ತಿತ್ತು. ತನ್ನ ಪತಿ ತನ್ನನ್ನು ಹೇಗೆ ಪ್ರೀತಿಸುತ್ತಿದ್ದನೋ ಅದೇ ರೀತಿ ಹಸು ತನ್ನನ್ನು ಪ್ರೀತಿಸುತ್ತದೆ ಎಂದು ಅಂದುಕೊಂಡು ಹಸುವನ್ನು ತನ್ನ ಗಂಡನಂತೆ ಪ್ರೀತಿಸುತ್ತಾಳೆ. ಇದನ್ನೂ ಓದಿ: ನಾಗರಹಾವಿನೊಂದಿಗೆ ಹುಡುಗಾಟವಾಡಿ ಮಸಣ ಸೇರಿದ ವೃದ್ಧ

ಗಂಡನ ಕೋಣೆಯಲ್ಲಿ ಇಟ್ಟಿದ್ದ ದಿಂಬನ್ನು ಹಸುವಿಗೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ಆಕೆ ಹಸು ಒಟ್ಟಿಗೆ ವಾಸವಾಗಿದ್ದಾಳೆ. ಖಿಮ್ ಮಕ್ಕಳೂ ಈ ಹಸುವೇ ತಮ್ಮ ತಂದೆ ಎಂದು ನಂಬಿಕೊಂಡಿದ್ದಾರೆ. ಅವರು ಗೋವಿಗೆ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಮರಣದ ನಂತರ ಹಸುವನ್ನು ತಂದೆಯಂತೆ ಪ್ರೀತಿಸಬೇಕು, ಅದನ್ನು ಮಾರಾಟ ಮಾಡಬಾರದು, ಅದು ಮರಣ ಹೊಂದಿದರೆ ಅಂತ್ಯಕ್ರಿಯೆಯನ್ನು ಮಾಡಬೇಕು. ಚೆನ್ನಾಗಿ ಮೇವು ನೀಡಬೇಕು ಎಂದು ಖಿಮ್ ಆಣೆ ಪ್ರಮಾಣವನ್ನು ತನ್ನ ಮಕ್ಕಳಿಂದ  ಮಾಡಿಸಿಕೊಂಡಿದ್ದಾಳೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *