ನನಗೆ ನೀನು ಬೇಕು ಬಾ ಎಂದ ಇನ್ಸ್‌ಪೆಕ್ಟರ್ ವಿರುದ್ಧವೇ ದೂರು

ಬೆಂಗಳೂರು: ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲು ಹೋದವರಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕಿರುಕುಳ ನೀಡಿದ ಘಟನೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಸಂತಕುಮಾರ್ ಆರೋಪಿ. ಹೆಣ್ಣೂರಿನ ಶಕ್ತಿ ನಗರ ನಿವಾಸಿಯೊಬ್ಬರು ತಮ್ಮ ಮನೆಯನ್ನು ಕೆಲ ವರ್ಷಗಳ ಹಿಂದೆ ವರಲಕ್ಷ್ಮಿಗೆ ಲೀಸ್ ನೀಡಿದ್ದರು. ಲೀಸ್ ಹಣವಾಗಿ 7 ಲಕ್ಷ ರೂ. ಹಣವನ್ನು ಪಡೆದಿದ್ದರು. ಆದರೆ ನೀರಿನ ಬಿಲ್ ಮಾತ್ರ 1 ವರ್ಷದಿಂದ ಕಟ್ಟಿರಲಿಲ್ಲ. ವಾಟರ್ ಬಿಲ್ ಕೇಳಲು ಮನೆ ಮಾಲೀಕರಾದ ಸಂತ್ರಸ್ತೆ ಹೋಗಿದ್ದರು.

ಈ ವೇಳೆ ಗಲಾಟೆ ತೆಗೆದು ವರಲಕ್ಷ್ಮೀ ಹಾಗೂ ಅವರ ಗುಂಪು ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಕು ಹಾಕಿ, ಕೈ ಮುರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿಗಳಿಂದ ಸಂತ್ರಸ್ತೆ ತಪ್ಪಿಸಿಕೊಂಡು ಬಂದಿದ್ದಾರೆ.

ನೊಂದ ಸಂತ್ರಸ್ತೆ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದು ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ಹೋದರೆ, ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ. ಬದಲಿಗೆ ಇನ್ಸ್‌ಪೆಕ್ಟರ್ ವಸಂತ ಕುಮಾರ್ ದುರ್ವತನೆ ತೋರಿದ್ದಾರೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

POLICE JEEP

ಮಹಿಳೆ ಅನ್ನೋದು ನೋಡದೇ ಅಸಭ್ಯವಾಗಿ ವರ್ತಿಸಿದ್ದಾರೆ. ಜೊತೆಗೆ ನನಗೆ ನೀನು ಬೇಕು ಬಾ ಎಂದು ಅಸಭ್ಯ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನೊಂದ ಮಹಿಳೆ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಘಟನೆ ಕುರಿತು ನ್ಯಾಯಕ್ಕಾಗಿ ನೊಂದ ಮಹಿಳೆ ಅಲೆಯುತ್ತಿದ್ದಾಳೆ. ಇದನ್ನೂ ಓದಿ:  ಗಾಂಜಾ ಮಾರುತ್ತಿದ್ದ ಪೊಲೀಸರನ್ನು ಅರೆಸ್ಟ್ ಮಾಡಿದ್ದ ಇನ್‌ಸ್ಪೆಕ್ಟರ್ ಸಸ್ಪೆಂಡ್

Comments

Leave a Reply

Your email address will not be published. Required fields are marked *