ಟೆಕ್ಕಿ ಜೊತೆ ಜಗಳವಾಡಿ, 2 ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ್ಳು!

ಚೆನ್ನೈ: ತನ್ನ ಇಬ್ಬರೂ ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಚೆನ್ನೈನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜಿನ್ಹಾ ಶಾ (35) ಆತ್ನಹತ್ಯೆಗೆ ಶರಣಾದ ಮಹಿಳೆ. ಜಿನ್ಹಾ ಶಾ, ಸಿರಿಕ್ ಶಾ (39) ಟೆಕ್ಕಿಯನ್ನು ಮದುವೆಯಾಗಿದ್ದರು. ಇಬ್ಬರೂ ಗುಜರಾತ್‍ನವರಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದು ಇಂದು ಬೆಳಕಿಗೆ ಬಂದಿದೆ.

ಸಂಕ್ರಾಂತಿ ಹಬ್ಬವನ್ನು ಆಚರಿಸಲು ಜಿನ್ಹಾ ಶಾ ಕುಟುಂಬ ಸಮೇತ ಗುಜರಾತ್ ಗೆ ಹೋಗಿದ್ದರು. ಗುಜರಾತ್ ನಿಂದ ಚೆನ್ನೈಗೆ ಹಿಂತಿರುವಾಗ ದಂಪತಿ ನಡುವೆ ಜಗಳ ನಡೆದಿದೆ. ಜಗಳದ ಬಳಿಕ ಸಿರಿಕ್ ಮನೆ ಬಿಟ್ಟು ಹೋಗಿದ್ದು, ಮತ್ತೆ ಹಿಂದಿರುಗಲಿಲ್ಲ. ಮನೆ ಬಿಟ್ಟು ಹೋದ ಸಿರಿಕ್ ಸಿಗದೇ ಇದ್ದಾಗ ಜಿನ್ಹಾ ಖಿನ್ನತೆಗೆ ಒಳಾಗಾಗಿದ್ದಳು. ಆದರೆ ಅವರು ತಮ್ಮ ಕುಟುಂಬದವರ ಜೊತೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನನ್ನ ಹಾಗೂ ನನ್ನ ಪತಿ ಮಧ್ಯೆ ಏನೂ ಸರಿಯಿಲ್ಲ. ನಾನೂ ನನ್ನ ಜೀವನವನ್ನು ಕೊನೆ ಮಾಡಲು ಇಚ್ಚಿಸುತ್ತೇನೆ ಎಂದು ಜಿನ್ಹಾ ನನ್ನ ಬಳಿ ಹೇಳಿದ್ದಳು ಎಂದು ಜಿನ್ಹಾರ ತಾಯಿ ನೀತಾ ಪೊಲೀಸರಿಗೆ ತಿಳಿಸಿದ್ದಾರೆ.

ಜಿನ್ಹಾ ಮನೆಯಲ್ಲಿರುವ ಫ್ಯಾನಿಗೆ ನೇಣು ಹಾಕಿಕೊಂಡಿದ್ದು, ಆತ್ಮಹತ್ಯೆಗೆ ಶರಣಾದ ಜಾಗದಲ್ಲಿ ಗುಜರಾತಿ ಭಾಷೆಯಲ್ಲಿರುವ ಡೆತ್ ನೋಟ್ ಸಿಕ್ಕಿದೆ. ಸದ್ಯ ಜಿನ್ಹಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲದೇ ಸಿರಿಕ್‍ನನ್ನು ಕೂಡ ಪೊಲೀಸರು ಹುಡುಕಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *