ಬೆಳ್ಳಂಬೆಳಗ್ಗೆ ಗೃಹಿಣಿ ಬರ್ಬರ ಹತ್ಯೆ – ದೂರು ದಾಖಲಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಂದನಾ ಪ್ರಿಯಕರ?

ಚಿಕ್ಕಬಳ್ಳಾಪುರ: ಗೃಹಿಣಿಯೊಬ್ಬಳು ಮನೆಯ ಮುಂದೆಯೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದಿದೆ.

ಭಾಗ್ಯಶ್ರೀ(35) ಕೊಲೆಯಾದ ದುರ್ದೈವಿ. ಪತಿ ಚನ್ನಬಸವಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಭಾಗ್ಯಶ್ರೀ ಇಂದು ಬೆಳ್ಳಂಬೆಳಗ್ಗೆ ಕೊಲೆಯಾಗಿದ್ದಾಳೆ. ಈ ಕೊಲೆಯನ್ನು ಇದೇ ಗ್ರಾಮದ ರಿಯಾಜ್ ಮಾಡಿರಬೇಕು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ – ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ಆಯೋಜನೆ

ಹೌದು, ಮೃತ ಭಾಗ್ಯಶ್ರೀ ಇದೇ ಗ್ರಾಮದ ಮುಸ್ಲಿಂ ಸಮುದಾಯದ ರಿಯಾಜ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಸಲುಗೆಯಲ್ಲಿ ದುಡ್ಡು ಕಾಸು ಕೊಟ್ಟು ತೆಗೆದುಕೊಳ್ಳುವ ವ್ಯವವಹಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಕಳೆದ 3 ದಿನಗಳ ಹಿಂದೆ ರಿಯಾಜ್ ಸುಖಾಸುಮ್ಮನೆ ದುಡ್ಡು ಕೊಡಬೇಕು ಅಂತ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಭಾಗ್ಯಶ್ರೀ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ.

ಇದೇ ಜಿದ್ದಿಗೆ ಭಾಗ್ಯಶ್ರೀಯನ್ನು ರಿಯಾಜ್ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇಂದು ಬೆಳಗ್ಗೆ ಗಂಡ ಸಹ 5 ಗಂಟೆಗೆ ಫಂಕ್ಷನ್ ಇದೇ ಅಂತ ಮನೆಯಿಂದ ಹೊರಟು ಹೋಗಿದ್ದರು. ಮನೆಯಲ್ಲಿ ಗಂಡನಿಲ್ಲದ ಹೊತ್ತು ನೋಡಿ ರಿಯಾಜ್ ಬಂದು ಕೃತ್ಯ ಎಸಗಿ ಹೋಗಿದ್ದಾನೆ ಎನ್ನುವ ಅನುಮಾನ ಮೂಡಿದೆ. ಇದನ್ನೂ ಓದಿ: ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ

ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಾಥಮಿಕ ತನಿಖೆ ನಡೆಸಿ ಮೃತದೇಹವನ್ನ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆರಂಭದಲ್ಲಿ ಗಂಡನ ಫೋನ್ ಸ್ವಿಚ್ ಆಫ್ ಆದ ಕಾರಣ ಗಂಡ ಏನಾದರೂ ಕೊಲೆ ಮಾಡಿ ಹೋದನಾ ಅಂತಲೂ ಅನುಮಾನ ಮೂಡಿತ್ತು. ಆದರೆ ಕೊನೆಗೆ ವಿಷಯ ತಿಳಿದು ಗಂಡನೇ ಪೊಲೀಸ್ ಠಾಣೆ ಬಳಿ ಬಂದಿದ್ದು, ತನಗೇನು ಗೊತ್ತಿಲ್ಲ ಅಂತ ಹೇಳುತ್ತಿದ್ದಾನೆ. ರಿಯಾಜ್ ಸಹ ಘಟನೆ ನಂತರ ನಾಪತ್ತೆಯಾಗಿದ್ದು, ರಿಯಾಜ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *