ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಪ್ರೀತಿಸಿದವಳನ್ನೇ ಇಟ್ಟಿಗೆಯಿಂದ ಹೊಡೆದು ಕೊಂದ

brick

ನವದೆಹಲಿ: ಮದುವೆಯಾಗಲು ಒತ್ತಾಯಿಸಿದ ಪ್ರಿಯತಮೆಗೆ ಇಟ್ಟಿಗೆಯಿಂದ ಹೊಡೆದು ಪ್ರಿಯಕರನೇ ಹತ್ಯೆಗೈದಿರುವ ಘಟನೆ ರಾಜಧಾನಿ ದೆಹಲಿಯ ವಸಂತ್ ಕುಂಜ್‍ನಲ್ಲಿ ನಡೆದಿದೆ.

MARRIAGE

ಆರೋಪಿ ವಸಂತ್ ಕುಂಜ್‍ನ ಮಸೂದ್‍ಪುರ್ ಗ್ರಾಮದ ನಿವಾಸಿಯಾಗಿದ್ದು, 38 ವರ್ಷದ ಸಂಜಯ್ ಎಂದು ಗುರುತಿಸಲಾಗಿದೆ. ಇದೀಗ ಶುಕ್ರವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮಹಿಳೆ ಮದುವೆಯಾಗುವಂತೆ ಒತ್ತಾಯಿಸಿದ ಕಾರಣ ಕುಡಿದ ಅಮಲಿನಲ್ಲಿ ಆರೋಪಿ ಇಟ್ಟಿಗೆಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೌರಿಂಗ್, ಲೇಡಿ ಕರ್ಜನ್ ಆಸ್ಪತ್ರೆಗೆ ವಕ್ಫ್ ಮಹಿಳಾ ಪರಿಷತ್ತಿನಿಂದ 5 ಲಕ್ಷ ಸಹಾಯಧನ

ಮೇ 24 ರಂದು ವಸಂತ್ ಕುಂಜ್ ಸೌತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ನಂತರ ಮಹಿಳೆಯ ಗುರುತನ್ನು ಆಕೆಯ ಕುಟುಂಬಸ್ಥರ ಸಹಾಯದಿಂದ ಗುರುತಿಸಲಾಯಿತು. ಸಾವಿಗೂ ಮುನ್ನ ಮಹಿಳೆ ಆರೋಪಿಯನ್ನು ಭೇಟಿ ಮಾಡಿರುವ ವಿಚಾರ ಪೊಲೀಸರಿಗೆ ತಿಳಿದುಬಂದಿದ್ದು, ನಂತರ ಜೂನ್ 16ರಂದು ಗುರುವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಂತರ ವಿಚಾರಣೆ ವೇಳೆ ಆರೋಪಿ ಮೃತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಆಕೆ ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಘಟನೆಯ ದಿನ ಆರೋಪಿ ಮಹಿಳೆಯನ್ನು ಕೊಲ್ಲುವ ಉದ್ದೇಶವನ್ನು ಇಟ್ಟುಕೊಂಡು, ಮದ್ಯ ಸೇವಿಸಿ ಆಕೆಯನ್ನು ಸೈಕಲ್ ಮೂಲಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ನಂತರ ಮಹಿಳೆಯ ಒಪ್ಪಿಗೆ ಮೇರೆಗೆ ಸಂಭೋಗ ನಡೆಸಿ ಬಳಿಕ ಆಕೆಯ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ ಎಂದು ತಿಳಿಸಿದ್ದಾರೆ.

Live Tv

Comments

Leave a Reply

Your email address will not be published. Required fields are marked *