ದನ ಮೇಯಿಸಲು ಹೋಗಿದ್ದ ವೇಳೆ ಚಿರತೆ ದಾಳಿ- ಮಹಿಳೆ ಸಾವು

ರಾಮನಗರ: ದನ ಮೇಯಿಸಲು ಹೋಗಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ರಾಮನಗರ ತಾಲೂಕಿನ ಚಿಕ್ಕಸೂಲಿಕೆರೆ ಗ್ರಾಮದಲ್ಲಿ ನಡೆದಿದೆ.

ಚಿಕ್ಕಸೂಲಿಕೆರೆ ಗ್ರಾಮದ ಪುಟ್ಟಹಲಗಮ್ಮ ಚಿರತೆ ದಾಳಿಗೆ ಸಿಕ್ಕಿ ಸಾವನ್ನಪ್ಪಿದ ಮಹಿಳೆ. ಇಂದು ದನ ಮೇಯಿಸಲು ಗ್ರಾಮದ ಹೊರಭಾಗದ ಕಾಡಿಗೆ ಹೋಗಿದ್ದರು. ಸಾಯಂಕಾಲದ ವೇಳೆಗೆ ಮರಳಿ ಮನೆಗೆ ದನ ಹೊಡೆದುಕೊಂಡು ಬರಲು ಮುಂದಾಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ.

ಪುಟ್ಟ ಹಲಗಮ್ಮ ಕುತ್ತಿಗೆ ಭಾಗದಲ್ಲಿ ಚಿರತೆ ಕಚ್ಚಿದ್ದು ತೀವ್ರರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಸಾವನದುರ್ಗ ಅರಣ್ಯ ಪ್ರದೇಶದಿಂದ ಆಹಾರ ಹರಸಿ ಬಂದಿರುವ ಚಿರತೆ ಮಹಿಳೆಯನ್ನ ಕೊಂದು ಹಾಕಿದೆ. ಪದೇ ಪದೇ ಕಾಡುಪ್ರಾಣಿಗಳ ದಾಳಿಯಿಂದ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದ ಗ್ರಾಮಸ್ಥರು ಇದೀಗ ಮಹಿಳೆಯನ್ನು ಕಳೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *