ಮುಂಬೈ: ಸಾವು ಯಾರಿಗೆ ಹೇಗೆ, ಎಲ್ಲಿ, ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ರೀತಿ ಮುಂಬೈನಲ್ಲಿ (Mumbai) ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಂಡೆ ಕಲ್ಲೊಂದು (Rock) ಬೆಟ್ಟದಿಂದ ಉರುಳಿ ಕಾರಿನ ಸನ್‌ರೂಫ್‌ನಿಂದ ಒಳಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ.
ಹೌದು, ಮಹಾರಾಷ್ಟ್ರದ ಪರ್ವತ ಮಾರ್ಗವಾದ ತಮ್ಹಿನಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಸ್ನೇಹಲ್ ಗುಜರಾತಿ (43) ಮೃತ ಮಹಿಳೆ. ಇದನ್ನೂ ಓದಿ: Mumbai Hostage | 17 ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪಿ ಪೊಲೀಸರ ಗುಂಡಿಗೆ ಬಲಿ
ಮಹಿಳೆಯು ಪುಣೆಯಿಂದ ಮಂಗಾವ್‌ಗೆ ವೋಕ್ಸ್ವ್ಯಾಗನ್ ವರ್ಟಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಕಾರಿನ ಮೇಲೆ ಬಂಡೆ ಕಲ್ಲೊಂದು ಉರುಳಿ ಸನ್‌ರೂಫ್ ಮೂಲಕ ಒಳಗೆ ಬಿದ್ದಿದೆ. ಮಹಿಳೆ ಕೂತಿದ್ದ ಸೀಟಿನ ಮೇಲೆ ಬಿದ್ದಿದ್ದರಿಂದ ಆಕೆಯ ತಲೆಗೆ ನೇರವಾಗಿ ಬಂಡೆ ಕಲ್ಲು ಬಡಿದು, ಮೃತಪಟ್ಟಿದ್ದಾರೆ.
ಅಲ್ಲದೇ ಮುಂಬೈನಲ್ಲಿ ಪ್ರತ್ಯೇಕ ಘಟನೆಯೊಂದು ಸಂಭವಿಸಿದ್ದು, ಚಾಲಕ ತನ್ನ ಸಮಯಪ್ರಜ್ಞೆಯಿಂದ 12 ಪ್ರಯಾಣಿಕರ ಜೀವ ಉಳಿಸಿದ್ದಾನೆ. ಬುಧವಾರ ನಸುಕಿನ ವೇಳೆ 3 ಗಂಟೆ ಸುಮಾರಿಗೆ ಮುಂಬೈನಿಂದ ಜಲ್ನಾಗೆ ಪ್ರಯಾಣಿಸುತ್ತಿದ್ದಾಗ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಐಷಾರಾಮಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು.
ಕೂಡಲೇ ಎಚ್ಚೆತ್ತುಕೊಂಡ ಚಾಲಕ 12 ಪ್ರಯಾಣಿಕರನ್ನು ತಕ್ಷಣವೇ ಬಸ್‌ನಿಂದ ಕೆಳಗಿಳಿಸಿ ಅವರ ಪ್ರಾಣ ಉಳಿಸಿದ್ದಾನೆ.
