ಅತ್ಯಾಚಾರಕ್ಕೆ ಯತ್ನ – ಕಾಮುಕನಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿಂದ ಜಿಗಿದ ಮಹಿಳೆ

ಹೈದರಾಬಾದ್: ರೈಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಹಿನ್ನೆಲೆ ಮಹಿಳೆಯು ರೈಲಿನಿಂದ ಹಾರಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

ಖಾಸಗಿ ವಲಯದ ಉದ್ಯೋಗಿಯಾಗಿರುವ ಮಹಿಳೆ, ಮೊಬೈಲ್ ಫೋನ್ ಸರಿಮಾಡಲು ಮೆಡ್ಚಲ್‌ನಿಂದ ಸಿಕಂದರಾಬಾದ್‌ಗೆ (Secunderabad) ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ನಾನು ಸಿಎಂ ಆದ್ರೆ ಸಾವಿರ ಜೆಸಿಬಿ ಆರ್ಡರ್, ಪ್ರತಿ ತಾಲೂಕಿಗೆ 35 ಇಡ್ತೀನಿ: ಯತ್ನಾಳ್‌

ಮಾ. 22ರಂದು ಸಂಜೆ ಸಿಕಂದರಾಬಾದ್ ರೈಲ್ವೆ ನಿಲ್ದಾಣದಿಂದ ಮೆಡ್ಚಲ್‌ಗೆ (Medchal) ಹೋಗುವ ಮಲ್ಟಿ ಮಾಡಲ್ ಟ್ರಾರ್ನ್ಸ್‌ಪೋರ್ಟ್‌ ಸರ್ವಿಸ್ ರೈಲಿನ ಮಹಿಳಾ ಕೋಚ್‌ನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದೆ. ಅಲ್ವಾಲ್ ರೈಲ್ವೆ ನಿಲ್ದಾಣದಲ್ಲಿ (Alwal railway station) ಹತ್ತಿದ ಸುಮಾರು 25 ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿ ಲೈಂಗಿಕ ಕ್ರಿಯೆಗೆ ಬೇಡಿಕೆ ಇಟ್ಟಿದ್ದ. ಆತನಿಗೆ ಸಹಕರಿಸಲು ನಿರಾಕರಿಸಿದಾಗ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದನು. ಆತನಿಂದ ತಪ್ಪಿಸಿಕೊಳ್ಳಲು ಚಲಿಸುವ ರೈಲಿನಿಂದ ಹೊರಗೆ ಹಾರಿದೆ ಎಂದು ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

ಮಹಿಳೆಯ ತಲೆ, ಗಲ್ಲ, ಬಲಗೈ ಮತ್ತು ಸೊಂಟದ ಮೇಲೆ ತೀವ್ರ ಗಾಯಗಳಾಗಿದ್ದು, ರೈಲ್ವೆ ಹಳಿ ಬಳಿ ಹೋಗುತ್ತಿದ್ದ ಕೆಲವರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮಹಿಳೆಯ ದೂರಿನ ಆಧಾರದ ಮೇಲೆ ಬಿಎನ್‌ಎಸ್‌ನ (BNS) ಸೆಕ್ಷನ್ 75 ಮತ್ತು 131 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್‌ ಕೇಸ್‌- ಮಂಗಳವಾರ ರಾಜಣ್ಣ ದೂರು, ಎಸ್‌ಐಟಿ ರಚನೆ ಸಾಧ್ಯತೆ