ರೈಲ್ವೇ, ಪ್ಲಾಟಫಾರಂ ನಡುವೆ ಸಿಲುಕಿದ್ರೂ ಬದುಕಿದ ಮಹಿಳೆ

ಮುಂಬೈ: ರೈಲು ಮತ್ತು ಪ್ಲಾಟ್‍ಫಾರಂ ನಡುವೆ ಸಿಲುಕಿದ ಮಹಿಳೆ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ.

ಮುಂಬೈನ ದಾದರ್ ರೈಲ್ವೇ ನಿಲ್ದಾಣದಲ್ಲಿ ಮಹಿಳೆ ಟ್ರ್ಯಾಕ್ ಮೇಲೆ ನಡೆದುಕೊಂಡು ಬಂದು ಪ್ಲಾಟ್‍ಫಾರಂ ಬದಲಿಸುತ್ತಿದ್ದರು. ರೈಲು ಬರುತ್ತಿದ್ದನ್ನ ಗಮನಿಸಿದ ಮಹಿಳೆ ಅವಸರವಾಗಿ ಪ್ಲಾಟ್‍ಫಾರಂ ಹತ್ತಲು ಮುಂದಾಗಿದ್ದಾರೆ. ಈ ವೇಳೆ ಮಹಿಳೆ ದೇಹದ ಅರ್ಧಭಾಗ ರೈಲಿನಡಿ ಸಿಲುಕಿತ್ತು. ಕೂಡಲೇ ಎಚ್ಚೆತ್ತ ಲೋಕೋಪೈಲಟ್ ರೈಲು ನಿಲ್ಲಿಸಿದ್ದಾರೆ.

ರೈಲು ನಿಲ್ಲುತ್ತಿದ್ದಂತೆ ಇತರೆ ಪ್ರಯಾಣಿಕರು ಮಹಿಳೆಯನ್ನು ಮೇಲೆತ್ತಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ರೈಲ್ವೇ ಪೊಲೀಸರು ಮಹಿಳೆಯನ್ನು ನಿಲ್ದಾಣದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಹೆಸರು ತಿಳಿದು ಬಂದಿಲ್ಲ.

ನಿಲ್ದಾಣದಲ್ಲಿ ಮೇಲ್ಸತುವೆ ಬಳಸದ ಮಹಿಳೆ ಅಪಾಯ ಎಂದು ಗೊತ್ತಿದ್ದರೂ, ಟ್ರ್ಯಾಕ್ ಮೇಲೆ ನಡೆದುಕೊಂಡು ಬಂದಿದ್ದಾರೆ. ಮಹಿಳೆಯ ಬೇಜವಾಬ್ದಾರಿಯೇ ಘಟನೆಗೆ ಕಾರಣ ಎಂದು ಸಹ ಪ್ರಯಾಣಿಕರು ಹೇಳಿದ್ದಾರೆ.

https://www.youtube.com/watch?v=Gp4eMjy0DLU

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *