ಬಾಗಲಕೋಟೆ: ಶೌಚಕ್ಕೆಂದು ತೆರಳಿ ಶೌಚಾಲಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಗಿನ ಜಾವ ಹುನಗುಂದ ತಾಲೂಕಿನ ಇಳಕಲ್ ಬಸ್‍ನಿಲ್ದಾಣದಲ್ಲಿ ನಡೆದಿದೆ.
ನಿರ್ಮಲಾ ಹಡಪದ ಎಂಬವರೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ. ನಿರ್ಮಲಾ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಣಿ ಗ್ರಾಮದದವರು. ಪತಿ ಸಿದ್ದೇಶ ಜೊತೆ ದುಡಿಯಲು ಗೋವಾಕ್ಕೆ ತೆರಳಿದ್ದ ನಿರ್ಮಲಾ ಈ ನಡುವೆ ತನ್ನ ತಾಯಿ ಊರು ಹುನಗುಂದ ತಾಲೂಕಿನ ಕಂದಗಲ್ಲಗೆ ಹೊರಟಿದ್ದರು.
ಈ ಸಂದರ್ಭದಲ್ಲಿ ಶೌಚಕ್ಕೆ ತೆರಳಿದ್ದ ನಿರ್ಮಲಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದಲ್ಲದೇ ಶೌಚಾಲಯದ ಕೊಠಡಿಯಲ್ಲೇ ಹೆರಿಗೆಯೂ ಆಗಿದೆ. ಈ ವೇಳೆ ಶೌಚಕ್ಕೆ ತೆರಳಿದ್ದ ಇತರ ಮಹಿಳೆಯರು ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದು, ಹೆರಿಗೆ ನಂತರ 108 ಆಂಬುಲೆನ್ಸ್ ಮೂಲಕ ಇಳಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ- ಮಗುವಿಗೆ ಚಿಕಿತ್ಸೆ ನೀಡಲಾಗಿದೆ.
ಅವಧಿ ಪೂರ್ವ 7 ತಿಂಗಳಿಗೆ ಹೆರಿಗೆ ಆಗಿದ್ದರಿಂದ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರ ಸಲಹೆ ನೀಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.





Leave a Reply